ಶಾಸಕ ಲಿಂಬಾವಳಿ ಹಲ್ಲೆಗೆ ಯತ್ನಿಸಲಾಯಿತೆ?

Published : Jul 05, 2017, 07:54 PM ISTUpdated : Apr 11, 2018, 01:08 PM IST
ಶಾಸಕ ಲಿಂಬಾವಳಿ ಹಲ್ಲೆಗೆ ಯತ್ನಿಸಲಾಯಿತೆ?

ಸಾರಾಂಶ

ಈ ಕಾರ್ಯಕ್ರಮ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ ಕೋಲಿ ಸಮುದಾಯದ ಕೆಲ ಮುಖಂಡರು ತಮಗೂ ರಾಮ್​ನಾಥ್​ ಕೋವಿಂದ್ ಅವರ ಭೇಟಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ.

ಬೆಂಗಳೂರು(ಜು.05): ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಇಂದು ಎನ್'ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್ ಕೋವಿಂದ್ ಅವರ ಬೆಂಗಳೂರು ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ವಹಿಸಿದ್ದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಮ್​ನಾಥ್​ ಕೋವಿಂದ್ ಆಗಮಿಸಿ ತಮ್ಮ ಪರ ಮತ ಚಲಾಯಿಸುವಂತೆ ಬಿಜೆಪಿಯ ಹಾಗೂ ತಮಗೆ ಬೆಂಬಲ ವ್ಯಕ್ತಪಡಿಸಿದ ಎಲ್ಲ ಪ್ರಮುಖರಿಗೆ ಮನವಿ ಮಾಡಿದರು.ಈ ಕಾರ್ಯಕ್ರಮ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ ಕೋಲಿ ಸಮುದಾಯದ ಕೆಲ ಮುಖಂಡರು ತಮಗೂ ರಾಮ್​ನಾಥ್​ ಕೋವಿಂದ್ ಅವರ ಭೇಟಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ. ಅವಕಾಶ ಸಿಕ್ಕದಿದ್ದಾಗ ತಳ್ಳಾಟ ನೂಕಾಟ ನಡೆಯಿತು.

ಆದರೆ ಲಿಂಬಾವಳಿ ಅವರು ಹೇಳುವ ಪ್ರಕಾರ, ಅವರ ಮೇಲೆ ಯಾವುದೇ ಹಲ್ಲೆ ಯತ್ನ ನಡೆದಿಲ್ಲ. ರಾಮ್​ನಾಥ್​ ಕೋವಿಂದ್​ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳಲು ತಡವಾದ ಕಾರಣ ಯಾರನ್ನೂ ಭೇಟಿ ಮಾಡದಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರ ಭೇಟಿಗೆ ಅವಕಾಶ ನಿರಾಕರಿಸಲಾಯಿತು ಎನ್ನುವುದು ಲಿಂಬಾವಳಿ ಅವರ ಸ್ಪಷ್ಟನೆ.ಒಟ್ಟಾರೆ, ರಾಷ್ಟ್ರೀಯ ಪ್ರಜಸತ್ತಾತ್ಮಕ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್​ ಕೋವಿಂದ್ ಅವರ ಬೆಂಗಳೂರು ಭೇಟಿ ಕಾರ್ಯಕ್ರಮ ತಳ್ಳಾಟ, ನೂಕಾಟ, ವಾಗ್ದಾದಕ್ಕೂ ಸಾಕ್ಷಿಯಾಯ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ