ಅಭಿವೃದ್ಧಿಯೊಂದಿಗೆ ಉಗ್ರರನ್ನು ಸದೆಬಡಿಯೋಣ: ಎರಡೂ ರಾಷ್ಟ್ರಗಳ ಪಣ

By Suvarna Web DeskFirst Published Jul 5, 2017, 6:33 PM IST
Highlights

ಇಸ್ರೇಲ್​ ಪ್ರಧಾನಿ ನೆತಾನ್ಯಾಹು ಮಾತನಾಡಿ, ಭಾರತ-ಇಸ್ರೇಲ್​ ಜೊತೆಯಾಗಿ ಇತಿಹಾಸ ನಿರ್ಮಿಸಲಿವೆ. ಇಸ್ರೇಲ್ ಅನ್ನುವ ಪ್ರಬಲ ರಾಷ್ಟ್ರ ನೇರವು ಭಾರತಕ್ಕಿದೆ. ಅಲ್ಲಿನ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್ ನೀಡಲಿದೆ.

ಜೆರುಸಲೆಮ್ (ಜು.05): ಐತಿಹಾಸಿಕ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ  ವಿಮಾನಯಾನ, ಕೃಷಿ, ಬಾಹ್ಯಾಕಾಶ ಕ್ಷೇತ್ರಗಳು ಸೇರಿದಂತೆ ಒಟ್ಟು 7 ಒಪ್ಪಂದಗಳಿಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ಸಹಿ ಮಾಡಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಎರಡೂ ರಾಷ್ಟ್ರಗಳ ಪ್ರಧಾನಿಗಳು, ಭಾರತ-ಇಸ್ರೇಲ್​ ಸಂಬಂಧವನ್ನು ಎತ್ತರಕ್ಕೆ ಕೊಂಡೊಯ್ಯುದರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನಮ್ಮ ಮಾರ್ಗಗಳು ಬೇರೆ ಬೇರೆಯಾದರೂ ನಂಬಿಕೆ ಒಂದೇ ಆಗಿದೆ. ಉಭಯ ರಾಷ್ಟ್ರಗಳಿಗೂ ಒಂದೇ ಗುರಿ ಇದ್ದು, ಎರಡೂ ದೇಶಗಳೂ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿವೆ. ಜಾಗತಿ ಸಮಸ್ಯೆಯನ್ನು ಒಗ್ಗಟ್ಟಾಗಿ ಎದುರಿಸಿ ಎರಡೂ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಇಸ್ರೇಲ್ ಭೇಟಿ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿಗೆ ಭೇಟಿ ನೀಡಿರುವ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆ ನನಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ.  ಶೀಘ್ರವೇ ಭಾರತಕ್ಕೆ ಇಸ್ರೇಲ್​ ಪ್ರಧಾನಿ ನೆತಾನ್ಯಾಹು ಆಗಮಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

ಪ್ರಬಲ ರಾಷ್ಟ್ರದ ನೆರವು ಭಾರತಕ್ಕಿದೆ.

ಇಸ್ರೇಲ್​ ಪ್ರಧಾನಿ ನೆತಾನ್ಯಾಹು ಮಾತನಾಡಿ, ಭಾರತ-ಇಸ್ರೇಲ್​ ಜೊತೆಯಾಗಿ ಇತಿಹಾಸ ನಿರ್ಮಿಸಲಿವೆ. ಇಸ್ರೇಲ್ ಅನ್ನುವ ಪ್ರಬಲ ರಾಷ್ಟ್ರ ನೇರವು ಭಾರತಕ್ಕಿದೆ. ಅಲ್ಲಿನ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಸ್ರೇಲ್ ಸಾಥ್ ನೀಡಲಿದೆ. ಎರಡೂ ದೇಶಗಳ ಸಂಬಂಧವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿದೆ. ಒಂದು ಸಣ್ಣ ರಾಷ್ಟ್ರದ ಸಾಧನೆ ಇಡೀ ಜಗತ್ತಿಗೆ ಒಂದು ಅಧ್ಯಯ ಹಾಗೂ ಮಾರ್ಗದರ್ಶನವಾಗಿದೆ.ಪ್ರಧಾನಿ ಮೋದಿಯೊಂದಿಗೆ ಹಲವು ವಿಷಯಗಳನ್ನು ಚರ್ಚಿಸಲಾಗಿದೆ. ಒಟ್ಟಾಗಿ ಕೆಲಸ ಮಾಡಲು ಉಭಯ ದೇಶಗಳೂ ಬದ್ಧವಾಗಿದ್ದು, ಎರಡೂ ರಾಷ್ಟ್ರಗಳು ಉಗ್ರರ ವಿರುದ್ಧ ಹೋರಾಟ ಮಾಡುತ್ತೇವೆ' ಎಂದು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮೋದಿ ಈ ಸಂದರ್ಭದಲ್ಲಿ 26/11ರ ಮುಂಬೈ ಮಠದಲ್ಲಿ ಬದುಕುಳಿದ 10 ವರ್ಷದ ಬಾಲಕ ಮೋಷೆಯನ್ನು ಭೇಟಿ ಮಾಡಿದರು. ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮೋಷೆ 4 ತಿಂಗಳ ಮಗುವಾಗಿತ್ತು.   

click me!