
ಬೆಂಗಳೂರು(ಮಾ.03): ಸ್ವಂತ ಮನೆಯೊಂದು ಇರಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಕನಸಿನ ಮನೆ ಕೊಳ್ಳುವಾಗ ತುಂಬಾ ಎಚ್ಚರದಿಂದ ಇರಬೇಕು. ಅದರ ದಾಖಲೆ ಸರಿಯಾಗಿ ಇದೆಯಾ ಎಂದು ಪರಿಶೀಲಿಸಿಕೊಳ್ಳಬೇಕು. ಮನೆ ಕೊಳ್ಳುವ ಪರಿಸರ ಚೆನ್ನಾಗಿರಬೇಕು. ನೀವು ಬಯಸಿದಂತಹ ಮನೆ ಬೇಕೆ? ಹಾಗಾದರೆ ಇಂದಿನಿಂದ ನಡೆಯಲ್ಲಿರುವ ಸುವರ್ಣ ನ್ಯೂಸ್ಪ್ರಾಪರ್ಟಿ ಎಕ್ಸ್ಪೋ ಗೆ ಭೇಟಿ ನೀಡಿ. ನಿಮ್ಮ ಕನಸನ್ನ ನನಸು ಮಾಡಿಕೊಳ್ಳಿ.
ಇಂದಿನಿಂದ ಪ್ರಾಪರ್ಟಿ ಶೋ: ಸ್ವಂತ ಮನೆ ಕನಸನ್ನು ನನಸು ಮಾಡಲು ಬಿಲ್ಡರ್ಸ್ ರೆಡಿ
ಇವತ್ತು ನಡೆಯಲಿರುವ ಪ್ರಾಪರ್ಟಿ ಶೋಗೆ ತಯಾರಿ ನಡೆದಿದ್ದು, ಆಸ್ತಾ ಪ್ರಾಪರ್ಟೀಸ್ ಸಹಯೋಗದಲ್ಲಿ ಮೊದಲ ಬಾರಿಗೆ ಈ ಪ್ರಾಪರ್ಟಿ ಎಕ್ಸ್ಪೊ ನಡೆಯಲಿದೆ. ಈ ಮೂಲಕ ಸ್ವಂತ ಮನೆಯ ಕನಸು ಕಾಣುವ ಮಂದಿಗೆ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಟಾಪ್ 65 ಬಿಲ್ಡರ್ಸ್ಗಳು ಈ ಪ್ರಾಪರ್ಟಿ ಶೋದಲ್ಲಿ ಭಾಗವಹಿಸುತ್ತಿದ್ದು, ಎಲ್ಲಾ ಮಾಹಿತಿಯನ್ನ ಪಡೆಯಬಹುದಾಗಿದೆ. ಯಾವುದೇ ಬ್ರೋಕರ್, ದಲ್ಲಾಳಿಗಳು ಪ್ರಾಪರ್ಟಿ ಕೊಳ್ಳುವಾಗ ಮೋಸ ಮಾಡುವ ಭಯವಿಲ್ಲ. ಸ್ಪಾಟ್ ಬುಕ್ಕಿಂಗ್ ಮಾಡಿದವರಿಗೆ ಹೋಂ ಲೋನ್ ಇನ್ಸೂರೆನ್ಸ್ ಕೂಡ ನೀಡಲಾಗುವುದು.
ಇನ್ನು ಈ ಎಕ್ಸ್ಪೋದಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಾಪರ್ಟಿಗಳ ಆಫರ್ಗಳನ್ನ ನೀಡಲಾಗಿದೆ. ಸ್ಥಳದಲ್ಲೇ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್'ಗಳಿಂದ ಸಾಲ ಪಡೆದುಕೊಳ್ಳುವ ಸೌಲಭ್ಯ ಕೂಡ ಮಾಡಲಾಗಿದೆ. ಆಸ್ತಾ ಬಿಲ್ಡರ್ಸ್ ಅವರಿಂದ ಬೆಂಗಳೂರಿನಲ್ಲಿ 30X40 ನಿವೇಶನ ಗ್ರ್ಯಾಂಡ್ ಬಂಪರ್ ಬಹುಮಾನ ಗೆಲ್ಲುವ ಅವಕಾಶ ಇಲ್ಲಿದೆ.
ಹಾಗಿದ್ದರೆ ಮತ್ಯಾಕೆ ತಡ? ಇಂದಿನಿಂದ ಮೂರು ದಿನಗಳ ಕಾಲ ಜಯಮಹಲ್ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯಲಿರೋ ಸುವರ್ಣ ನ್ಯೂಸ್ ನಮ್ಮ ಮನೆ ಪ್ರಾಪರ್ಟಿ ಎಕ್ಸ್ಪೊನಲ್ಲಿ ಪಾಲ್ಗೊಳ್ಳಿ, ಸ್ವಂತ ಮನೆಯ ಕನಸು ನನಸಾಗಿಸಿಕೊಳ್ಳಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.