
ಕನ್ನಡದಲ್ಲಿ ಮತ್ತೆ ಡಬ್ಬಿಂಗ್ ಭೂತ ತಲೆ ಎತ್ತಿದೆ. ಡಬ್ಬಿಂಗ್ ವಿರುದ್ಧ ಕನ್ನಡ ತಾರೆಯರು, ಹೋರಾಟಗಾರರು ಮತ್ತೆ ರೊಚ್ಚಿಗೆದ್ದಿದ್ದಾರೆ. ಡಬ್ ಚಿತ್ರ ರಿಲೀಸ್ ವಿರುದ್ಧ ಕೆಂಡಕಾರಿದ್ದಾರೆ. ಆದರೆ ತೀವ್ರ ವಿರೋಧದ ಮಧ್ಯೆಯೂ ತಮಿಳಿನ ಎನ್ನೈ ಅರಿಂದಾಳ್, ಸತ್ಯದೇವ್ ಐಪಿಎಸ್ ಆಗಿ ತೆರೆಗೆ ಬರುತ್ತಿದೆ.
55 ವರ್ಷದಿಂದಲೂ ಡಬ್ಬಿಂಗ್ ವಿರೋಧವಾಗಿ ಹೋರಾಟ ನಡೆಯುತ್ತಲೇ ಇದೆ. ಡಾಕ್ಟರ್ ರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗ, ಕನ್ನಡ ಪರ ಹೋರಾಟಗಾರರು ಡಬ್ಬಿಂಗನನ್ನ ತೀವ್ರ ವಿರೋಧಿಸುತ್ತಾ ಬಂದಿದ್ದರು. ಈ ವಿಚಾರದಲ್ಲಿ ಉಗ್ರ ಹೋರಾಟ ನಡೆಸಿ ಭೂಟಿನೇಟು ತಿಂದು ಡಬ್ಬಿಂಗ್ ಬರಲೇಬಾರದು ಎಂದು ಹಠ ಸಾಧಿಸಿದ್ದರು. ಅದರಲ್ಲಿ ಯಶಸ್ಸು ಕೂಡ ಸಾಧಿಸಿದ್ದರು. ಆದ್ರೆ ಈಗ ಮತ್ತೆ ಡಬ್ಬಿಂಗ್ ಸಿನಿಮಾ ರಿಲೀಸ್ ವಿಚಾರ ಸದ್ದು ಮಾಡುತ್ತಿದೆ. ಆದರೆ, ನಿಮಾ ರಿಲೀಸ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಡಬ್ಬಿಂಗ್ ಸಿನಿಮಾ ರಿಲೀಸ್ ಆಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಿರ್ಮಾಪಕ ಜಿ.ಕೃಷ್ಣಮೂರ್ತಿ ತಮ್ಮ ಡಬ್ಬಿಂಗ್ ಸತ್ಯದೇವ ಐಪಿಎಸ್ ಚಿತ್ರವನ್ನ ರಾಜ್ಯದ 60 ಥಿಯೇಟರ್ನಲ್ಲಿ ತೆರೆಗೂ ತರ್ತಿದ್ದಾರೆ. ಡಬ್ಬಿಂಗ್ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡ ಹೇಳೋವಂತೆ ಚಿತ್ರದ ರಿಲೀಸ್ ಖಚಿತ. ಅದರಲ್ಲಿ ಎರಡನೇ ಮಾತೇಯಿಲ್ಲ. ಆದರೆ, ಥಿಯೇಟರ್ ಸಂಖ್ಯೆ ಹಿಂದೆ ಮುಂದೆ ಆಗಬಹುದು ಅಂತಾರೆ. ಆದರೆ, ಚಿತ್ರದ ರಿಲೀಸ್ ನಿಂದ ಡಬ್ಬಿಂಗ್ ಹೋರಾಟದ ರೂಪ ಯಾವ ಹಂತಕ್ಕೆ ತಿರುಗುತ್ತದೆಯೋ ಇವತ್ತು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.