
ಬೆಂಗಳೂರು(ಆ.03): ಸಚಿವ ಡಿ.ಕೆ. ಶಿವಕುಮಾರ್, ಇಂಧನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅವರ ಆಸ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇವಲ ಎರಡೇ ವರ್ಷದಲ್ಲಿ ಅವರ ಆಸ್ತಿ ಪ್ರಮಾಣ ಎಷ್ಟಾಗಿದೆ ಗೊತ್ತಾ?
ಇಂಧನ ಸಚಿವ ಡಿ.ಕೆ ಶಿವಕುಮಾರ್ ಐಟಿ ರೇಡ್'ನಿಂದ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇಂಧನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅವರ ಆಸ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಲೋಕಾಯುಕ್ತಕ್ಕೆ 2014-2015ರಲ್ಲಿ ಆಸ್ತಿದಾಯಿತ್ವ ಪಟ್ಟಿ ಸಲ್ಲಿಸಿದ್ದು, ಸಚಿವರಾದ 2 ವರ್ಷಗಳ ಬಳಿಕ ಅವರ ಕುಟುಂಬದ ಆಸ್ತಿಯಲ್ಲಿ ಏರಿಕೆಯಾಗಿದೆ. ವಿವಿಧ ಕಂಪನಿಗಳಲ್ಲಿ ಷೇರುಗಳ ಹೂಡಿಕೆ ಮತ್ತು ಷೇರುಗಳ ಮೌಲ್ಯ- ವಿವಿಧ ಬ್ಯಾಂಕ್ಗಳಲ್ಲಿ ಇಟ್ಟಿರುವ ಠೇವಣಿಯಲ್ಲಿಯೂ ಹೆಚ್ಚಳವಾಗಿದ್ದು, ಸಾಲ-ಮುಂಗಡ ರೂಪದಲ್ಲಿ ಪಡೆದಿರುವ ಮತ್ತು ನೀಡಿರುವ ಮೊತ್ತದಲ್ಲೂ ಏರಿಕೆಯಾಗಿರುವುದು ಕಂಡು ಬಂದಿದೆ. ಗಂಗಾನಗರದಲ್ಲಿರುವ ವಿಜಯ ಬ್ಯಾಂಕ್ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯಲ್ಲಿ ಏರಿಕೆಯಾಗಿದೆ.
ಗಂಗಾನಗರದಲ್ಲಿರುವ ವಿಜಯ ಬ್ಯಾಂಕ್ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯಲ್ಲಿ ಏರಿಕೆಯಾಗಿದ್ದು, 2013-15ರ ಮಧ್ಯೆ 4,20,00,000 ಹೆಚ್ಚಳವಾಗಿದೆ. 2013ರಲ್ಲಿ 22,12,600 ರೂ.ಗಳಿದ್ದು, 2014ರಲ್ಲಿ 25,20,673 ರೂ., 2015ರಲ್ಲಿ ಇದೇ ಖಾತೆಯಲ್ಲಿ 4,42,35,471 ರೂ.ಇದೆ. ಅಂದರೆ 2 ವರ್ಷದಲ್ಲಿ ಅಂದಾಜು 12 ಪಟ್ಟು ಏರಿಕೆಯಾಗಿದ್ದು, ಒಟ್ಟಾರೆ 4 ಕೋಟಿ 66 ಲಕ್ಷ ರೂ.ಗಳಷ್ಟು ಹೆಚ್ಚಳವಾದಂತಾಗಿದೆ.
ಪತ್ನಿ ಉಷಾ ಶಿವಕುಮಾರ್ ಅವರಿಂದ ಶಿವಕುಮಾರ್ ಅವರು ಸಾಲ ಪಡೆದಿರುವ ಮೊತ್ತದಲ್ಲೂ ಏರಿಕೆಯಾಗಿದ್ದು, 2015ರಲ್ಲಿ 6 ಕೋಟಿ 36 ಲಕ್ಷ, ಸೋದರ ಡಿ.ಕೆ.ಸುರೇಶ್ ಅವರಿಂದ 1 ಕೋಟಿ ರೂ.ಗಳನ್ನು ಸಾಲವಾಗಿ ಪಡೆದಿರುವುದಾಗಿ ಆಸ್ತಿದಾಯಿತ್ವ ಪಟ್ಟಿಯಲ್ಲಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
2013ರಲ್ಲಿ 41 ಕೋಟಿ ರೂ.ಸಾಲ ನೀಡಿದ್ದರೆ, 2014 ಮಾರ್ಚ್ ಅಂತ್ಯಕ್ಕೆ 44.71 ಕೋಟಿ ರೂ., ಮಾರ್ಚ್ 2015 ಅಂತ್ಯಕ್ಕೆ 54.35 ಕೋಟಿ ರೂ.ಗಳಾಗಿವೆ. 2013-15ರಲ್ಲಿ ಸಾಲ-ಮುಂಗಡದ ಪ್ರಮಾಣದಲ್ಲಿ ಒಟ್ಟು 13 ಕೋಟಿ ರೂ.ಹೆಚ್ಚಳವಾಗಿದೆ.
2015 ಮಾರ್ಚ್ ಅಂತ್ಯಕ್ಕೆ ಪತ್ನಿ ಉಷಾ ಶಿವಕುಮಾರ್ ಅವರಿಂದ 6,35,00,000 ರೂ. ಸಾಲ-ಮುಂಗಡ ರೂಪದಲ್ಲಿ ಪಡೆದಿದ್ದಾರೆ. ಹಾಗೆಯೇ, 2013ರಲ್ಲಿ ಸಲಾರ್ಪುರಿಯಾ ಪ್ರಾಪರ್ಟಿಸ್ನಿಂದ 6 ಕೋಟಿ ರೂ.ಮುಂಗಡವಾಗಿ ಪಡೆದಿದ್ದಾರೆ, 2014ರಲ್ಲಿ 1,50,00,000 ರೂ.ಪಡೆಯುವ ಮೂಲಕ ಈ ಮೊತ್ತ ಒಟ್ಟು 7,50,00,000 ರೂ.ಗಳಿಗೇರಿದೆ. 2015ರಲ್ಲೂ ಇದೇ ಮೊತ್ತ ಮುಂದುವರೆದಿದೆ.
ಇಷ್ಟೇ ಅಲ್ಲದೆ ಇನ್ನು ಹಲವು ವ್ಯಕ್ತಿಗಳಿಗೆ ಕೋಟಿಗಟ್ಟಲೇ ಹಣ ಸಾಲ ನೀಡಿರುವ ಸಚಿವ ಡಿಕೆ.ಶಿವಕುಮಾರ್, ಅನೇಕ ಡೆವಲಪರ್ಸ್ ಕಂಪನಿಗಳಲ್ಲೂ ಹಣ ಹೂಡಿಕೆಯಲ್ಲಿ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ. ಒಟ್ನಲ್ಲಿ ಎರಡೇ ವರ್ಷದಲ್ಲಿ ಇಷ್ಟೊಂದು ಮೊತ್ತದಲ್ಲಿ ಹಣ ಹೆಚ್ಚಳವಾಗಿರೋದೇ ಐಟಿ ರೇಡ್‌ಗೆ ಕಾರಣ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.