ಕಾಂಗ್ರೆಸ್‌'ಗೆ ಲಾಭವಾಗುತ್ತಾ ಡಿಕೆಶಿ ಮನೆ ಮೇಲಿನ ಐಟಿ ದಾಳಿ?

By Suvarna Web DeskFirst Published Aug 3, 2017, 8:06 AM IST
Highlights

ನಿನ್ನೆ ಬೆಳ್ಳಂ ಬೆಳಗ್ಗೆ ಪವರ್ ಮಿನಿಸ್ಟರ್ ಮನೆ ಮೇಲೆ ನಡೆದ ಐಟಿ ದಾಳಿ ಇಡೀ ದೇಶಾದ್ಯಂತ ತೀವ್ರ ಸಂಚಲವನ್ನೇ ಮೂಡಿಸಿತ್ತು. ಐಟಿ ಇಲಾಖೆ ನೀಡಿದ ಹೈ ಪವರ್ ಶಾಕ್‌‌ಗೆ ಕಾಂಗ್ರೆಸ್ ತಲ್ಲಣಗೊಂಡಿತ್ತು. ಆದರೆ ಇದೀಗ ಐಟಿ ದಾಳಿಯನ್ನೇ ಅಸ್ತ್ರವಾಗಿಸಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ.

ಬೆಂಗಳೂರು(ಆ.03): ನಿನ್ನೆ ಬೆಳ್ಳಂ ಬೆಳಗ್ಗೆ ಪವರ್ ಮಿನಿಸ್ಟರ್ ಮನೆ ಮೇಲೆ ನಡೆದ ಐಟಿ ದಾಳಿ ಇಡೀ ದೇಶಾದ್ಯಂತ ತೀವ್ರ ಸಂಚಲವನ್ನೇ ಮೂಡಿಸಿತ್ತು. ಐಟಿ ಇಲಾಖೆ ನೀಡಿದ ಹೈ ಪವರ್ ಶಾಕ್‌‌ಗೆ ಕಾಂಗ್ರೆಸ್ ತಲ್ಲಣಗೊಂಡಿತ್ತು. ಆದರೆ ಇದೀಗ ಐಟಿ ದಾಳಿಯನ್ನೇ ಅಸ್ತ್ರವಾಗಿಸಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ.

ಕೇಂದ್ರವನ್ನು ವಿಲನ್ ಮಾಡೋ ಲೆಕ್ಕಾಚಾರ

Latest Videos

ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ದಾಳಿಯನ್ನೇ ಇಟ್ಟುಕೊಂಡು ಜನತೆಯ ಮುಂದೆ ಕೇಂದ್ರವನ್ನು ವಿಲನ್ ಮಾಡುವ ಲೆಕ್ಕಾಚಾರ ಕಾಂಗ್ರೆಸ್‌ ಪಕ್ಷದ್ದಾಗಿದೆ. ರಾಜಕೀಯವಾಗಿ ಕಾಂಗ್ರೆಸ್ ಅನ್ನು ಫೇಸ್ ಮಾಡೋ ಶಕ್ತಿ ರಾಜ್ಯ ಬಿಜೆಪಿ ನಾಯಕರಿಗೂ ಇಲ್ಲ, ಮೋದಿ ಮತ್ತು ಅಮಿತ್ ಷಾಗಿಲ್ಲ. ಹೀಗಾಗಿ ಐಟಿ ದಾಳಿ ಮೂಲಕ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಜನರನ್ನು ನಂಬಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.

ನರೇಂದ್ರ ಮೋದಿ ಎದುರಿಸಲು ಒಬ್ಬ ಡಿಕೆಶಿ ಸಾಕಂತೆ!

ಮುಂದಿನ ಎಲೆಕ್ಷನ್‌ನಲ್ಲಿ ಡಿಕೆಶಿಯನ್ನು ಸೂಪರ್ ಹೀರೋ ಮಾಡುವ ಲೆಕ್ಕಾಚಾರವೂ ಕಾಂಗ್ರೆಸ್'ನದ್ದಾಗಿದೆ. ಗುಜರಾತ್ ಶಾಸಕರಿಗೆ ಆತಿಥ್ಯ ನೀಡುವ ಮೂಲಕ ಮೋದಿಯನ್ನೇ ಎದುರು ಹಾಕಿಕೊಂಡ ನಾಯಕ ಅನ್ನೋ ರೀತಿಯಲ್ಲಿ ಡಿಕೆಶಿಯನ್ನು ಕಾಂಗ್ರೆಸ್ ಬಿಂಬಿಸಲು ಚಿಂತಿಸುತ್ತಿದೆ. ಇದರ ಜೊತೆ ಐಟಿ ದಾಳಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡಿಸುವ ಮೂಲಕ ನಾಳೆ ನಿಮ್ಮ ಪಕ್ಷದವರೂ ಟಾರ್ಗೆಟ್ ಆಗಬಹುದು ಈಗ ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಮೋದಿ ವಿರುದ್ಧ ಬೀದಿಗಿಳಿಯಲು ಚಿಂತಿಸುತ್ತಿದೆ.

ಕಾಂಗ್ರೆಸ್ ಹೈಕಮಾಂಡ್‌'ಗೆ ಮತ್ತಷ್ಟು ಹತ್ತಿರವಾದ ಡಿಕೆಶಿ

ಗುಜರಾತ್ ಶಾಸಕರಿಗೆ ಆತಿಥ್ಯ ನೀಡಬೇಕು ಅನ್ನೋ ವಿಚಾರ ಬಂದಾಗ ಯಾವೊಬ್ಬ ಸಚಿವರು ಅದರ ಜವಾಬ್ದಾರಿ ಹೊತ್ತುಕೊಳ್ಳಲಿಲ್ಲ. ಆದ್ರೆ ಡಿಕೆಶಿ ಹೊತ್ತುಕೊಂಡರು. ಈ ಬೆಳವಣಿಗೆ ಮೂಲಕ ಹೈಕಮಾಂಡ್​ನ ಕಟ್ಟಾ ಸೇವಕ ಅನ್ನೋದನ್ನು ಡಿಕೆಶಿ ಸಾಬೀತು ಪಡಿಸಿದ್ದಾರೆ. ಇದೇ ಹಿನ್ನೆಲೆ ಐಟಿ ದಾಳಿ ನಡೆದಿದೆ ಎಂಬಂತೆ ಬಿಂಬಿಸಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ

ಅಹಿಂದ ಮತ ಸೆಳೆಯಲು ‘ಕೈ’ಗೆ ಅಸ್ತ್ರವಾಗುತ್ತಾ?

ಬಿಜೆಪಿಯ ಸಣ್ಣತನವನ್ನ ಬಯಲು ಮಾಡಿ, ಆ ಮೂಲಕ ಅಲ್ಪಸಂಖ್ಯಾತ ಹಾಗೂ ಅಹಿಂದ ವರ್ಗಗಳನ್ನು ಸೆಳೆಯೋ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮಾಡಬಹುದು. ಆದ್ರೆ ಈ ವಿಚಾರದಲ್ಲಿ ಕಾಂಗ್ರೆಸ್ ಎಷ್ಟು ಅಗ್ರೇಸ್ಸಿವ್ ಆಗಿ ಮುನ್ನುಗ್ಗುತ್ತೆ ಅನ್ನೋದರ ಮೇಲೆ ಲಾಭ-ನಷ್ಟದ ಲೆಕ್ಕಾಚಾರ ಅಡಗಿದೆ.

click me!