ಊರಿಗೆಲ್ಲ ಯುಗಾದಿ ಹಬ್ಬ, ಇವರಿಗೆ ಮಾತ್ರ ಮ್ಯಾನ್'ಹೋಲ್'ನಲ್ಲಿ ಕೆಲಸ: ರಾಜ್ಯದಲ್ಲಿ ಮಲಹೊರುವ ಪದ್ಧತಿ ಜೀವಂತ

Published : Mar 30, 2017, 02:46 AM ISTUpdated : Apr 11, 2018, 01:05 PM IST
ಊರಿಗೆಲ್ಲ ಯುಗಾದಿ ಹಬ್ಬ, ಇವರಿಗೆ ಮಾತ್ರ ಮ್ಯಾನ್'ಹೋಲ್'ನಲ್ಲಿ ಕೆಲಸ: ರಾಜ್ಯದಲ್ಲಿ ಮಲಹೊರುವ ಪದ್ಧತಿ ಜೀವಂತ

ಸಾರಾಂಶ

ಮಲ ಹೋರುವ ಪದ್ದತಿಯನ್ನ ಸರಕಾರ ನಿಷೇಧ ಮಾಡಿ ಹಲವು ವರ್ಷಗಳು ಕಳೆದ್ರೂ ಬೀದರ್ ಜಿಲ್ಲೆಯಲ್ಲಿ ಮಲ ಹೋರುವ ಪದ್ದತಿ ಇನ್ನು ಜೀವಂತವಾಗಿದೆ. ಬೀದರ್ ರೈಲು ನಿಲ್ದಾಣದ ಹತ್ತಿರ ಬಾವಿಗಿಳಿದು ಮಲ ಹೊರ ತೆಗೆಯುತ್ತಿದ್ದ ದೃಶ್ಯ ಅಮಾಯಕ ಕೂಲಿ ಕಾರ್ಮಿಕರು ಈ ಅನಿಷ್ಠ ಪದ್ದತಿ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ.

ಬೀದರ್(ಮಾ.30): ಮಲ ಹೋರುವ ಪದ್ದತಿಯನ್ನ ಸರಕಾರ ನಿಷೇಧ ಮಾಡಿ ಹಲವು ವರ್ಷಗಳು ಕಳೆದ್ರೂ ಬೀದರ್ ಜಿಲ್ಲೆಯಲ್ಲಿ ಮಲ ಹೋರುವ ಪದ್ದತಿ ಇನ್ನು ಜೀವಂತವಾಗಿದೆ. ಬೀದರ್ ರೈಲು ನಿಲ್ದಾಣದ ಹತ್ತಿರ ಬಾವಿಗಿಳಿದು ಮಲ ಹೊರ ತೆಗೆಯುತ್ತಿದ್ದ ದೃಶ್ಯ ಅಮಾಯಕ ಕೂಲಿ ಕಾರ್ಮಿಕರು ಈ ಅನಿಷ್ಠ ಪದ್ದತಿ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ.

ನಾಡಿನ ಜನರೆಲ್ಲ ನಿನ್ನೆ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಈ ಕಾರ್ಮಿಕರು ಮಾತ್ರ ಮಲಹೊರುವ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಬೀದರ್ ನಗರದ ರೈಲ್ವೆ ನಿಲ್ದಾಣ ಪಕ್ಕದಲ್ಲೇ ಶೋಷಣೆ ನಡೆಯುತ್ತಿತ್ತು. ರೈಲ್ವೇ ಇಲಾಖೆ ವ್ಯಾಪ್ತಿಯ ಈ ಕಾಮಗಾರಿಯನ್ನು ರೈಲ್ವೆ ವರ್ಕ್​ ಇನ್ಸ್​ಪೆಕ್ಟರ್ ಎಮ್.ಎಸ್.ಗೌಡ ಎನ್ನುವವರು ಗುತ್ತಿಗೆದಾರನೊಬ್ಬನಿಗೆ ವಹಿಸಿದ್ದರು. ಆತನ ಅಣತಿಯಂತೆ ಪುಡಿಗಾಸಿನ ಆಸೆಗಾಗಿ ಕಳೆದ ನಾಲ್ಕು ದಿನಗಳಿಂದ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದರು.

ಆ ದೃಶ್ಯ ನೋಡಿ ಬೇಸರಗೊಂಡ ಸಾರ್ವಜನಿಕರು ಬೀದರ್ ಜಿಲ್ಲಾ ಸಶಸ್ತ್ರ ನ್ಯಾಯಾಲಯದ ನ್ಯಾಯಧೀಶರಾದ ಸಂಜೀವಕುಮಾರ ಹಂಚಾಟೆ ಅವರಿಗೆ ತಿಳಿಸಿದ್ದಾರೆ. ತಕ್ಷಣಕ್ಕೆ  ನ್ಯಾಯಧೀಶರು ಸ್ಥಳಕ್ಕೆ ಭೇಟಿ ನೀಡಿದ್ದರು. ಮಾರ್ಕೆಟ್ ಠಾಣೆ ಪೊಲೀಸರು ಕೂಡಾ ಬಂದು ಪರಿಶೀಲಿಸಿದರು.

ರೈಲ್ವೇ ವರ್ಕ್​ ಇನ್ಸ್ ಪೆಕ್ಟರ್ ಹಾಗೂ ಗುತ್ತಿಗೆದಾರರ ವಿರುದ್ಧ ಕಂಪ್ಲೇಂಟ್ ದಾಖಲಾಗಿದೆ. ಏನೇ ಆದರೂ ಈ ಅನಿಷ್ಟ ಪದ್ಧತಿಗೆ ನಮ್ಮ ದಿಕ್ಕಾರ.. ಜನನಾಯಕರೇ ಪುಡಿಗಾಸಿನ ಆಸೆ ತೋರಿಸಿ ಮಲ ಹೊರಿಸುವ ದೌರ್ಜನ್ಯಕ್ಕೆ ತಡೆ ಯಾವಾಗ..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ