ವೋಟರ್ ಐಡಿ ಅಪ್ಲಿಕೇಶನ್ ಟ್ರ್ಯಾಕ್ ಮಾಡೋದು ತುಂಬ ಸಿಂಪಲ್!

By Web DeskFirst Published Mar 10, 2019, 12:54 PM IST
Highlights

ಲೋಕಸಭೆ ಚುನಾವಣೆಗೆ ಶುರುವಾಗಿದೆ ಕ್ಷಣಗಣನೆ| ಇಂದು ಸಂಜೆ 5 ಗಂಟೆಗೆ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ| ವೋಟರ್ ಐಡಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿದ್ದೀರಾ?| ನಿಮ್ಮ ವೋಟರ್ ಐಡಿ ಸ್ಟೇಟಸ್ ಗಾಗಿ ಆನ್‌ಲೈನ್ ನಲ್ಲೇ ಮಾಹಿತಿ ಪಡೆಯಿರಿ| 

ಬೆಂಗಳೂರು(ಮಾ.10): ಸಾರ್ವತ್ರಿಕ ಚುನಾವಣೆಯನ್ನು ಭಾರತದ ರಾಷ್ಟ್ರೀಯ ಹಬ್ಬ ಎಂತಲೇ ಕರೆಯುತ್ತಾರೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕ ಜಾತಿ, ಲಿಂಗ, ಧರ್ಮದ ಹಂಗಿಲ್ಲದೇ ಒಟ್ಟಾಗಿ ಭಾಗವಹಿಸುವ ಲೋಕಸಭೆ ಚುನಾವಣೆ ಎಂಬ ರಾಷ್ಟ್ರೀಯ ಹಬ್ಬಕ್ಕೆ ಕ್ಷಣಗಣನೆ ಶುರುವಾಗಲಿದೆ. 

ಇನ್ನು ಯುವಪೀಳಿಗೆಯ ಒಂದು ದೊಡ್ಡ ಪಡೆಯನ್ನೇ ಹೊಂದಿರುವ ಭಾರತದಲ್ಲಿ, ಇದೇ ಮೊದಲ ಬಾರಿಗೆ ಮತದಾನ ಮಾಡಲು ಕೋಟ್ಯಂತರ ಯುವಕ, ಯುವತಿಯರು ಕುತೂಹಲದಿಂದ ಕಾಯುತ್ತಿದ್ದಾರೆ. 

ಆದರೆ ಮತದಾನ ಮಾಡಲು ವೋಟರ್ ಐಡಿ ಕಡ್ಡಾಯವಾಗಿದ್ದು, ಇನ್ನೂ ಹಲವಾರು ಮಂದಿ ಚುನಾವಣಾ ಆಯೋಗದ ಗುರುತಿನ ಚೀಟಿಗಾಗಿ ಕಾಯುತ್ತಿದ್ದಾರೆ.

ನೀವು ವೋಟರ್  ಐಡಿಯನ್ನು  ಪಡೆಯದಿದ್ದರೆ ಚುನಾವಣಾ ಆಯೋಗಕ್ಕೆ ಅಲೆಯಬೇಕೆಂದೆನಿಲ್ಲ. ಆನ್‌ಲೈನ್ ಮೂಲಕವೇ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಸ್ಟೇಟಸ್ ಕೂಡ ಪರಿಶೀಲಿಸಬಹುದಾಗಿದೆ.

ವೋಟರ್ ಐಡಿ ಸ್ಟೇಟಸ್ ಕಂಡುಕೊಳ್ಳುವ ವಿಧಾನ:
1. ರಾಷ್ಟ್ರೀಯ ವೋಟರ್ ಸರ್ವೀಸಸ್ ಪೋರ್ಟಲ್ ಪೇಜ್  (NVSP)ಗೆ  ಭೇಟಿ ನೀಡಬೇಕು.
2. ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಿದ ಬಳಿಕ ಆಯೋಗದಿಂದ ರೆಫರೆನ್ಸ್ ಐಡಿ ಜನರೇಟ್ ಆಗುತ್ತದೆ.
3. ಬಳಿಕ ಹೋಂ ಪೇಜ್ ನಲ್ಲಿ Track Application Status ವಿಭಾಗ ಕ್ಲಿಕ್ ಮಾಡಬೇಕು.
4. ಜನರೇಟ್ ಆದ ರೆಫರೆನ್ಸ್ ಐಡಿಯನ್ನು ನಮೂದಿಸಿ Track ಬಟನ್ ಕ್ಲಿಕ್ ಮಾಡಬೇಕು.
5. ಕೂಡಲೇ ನಿಮ್ಮ ವೋಟರ್ ಐಡಿ ಸ್ಟೇಟಸ್ ಕುರಿತು ಮಾಹಿತಿ ಲಭ್ಯವಾಗುತ್ತದೆ.

click me!