ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಮಹಾ ಟ್ವಿಸ್ಟ್ : ಮೋದಿ ಕೊಟ್ರು ಈ ಸೂಚನೆ!

By Web DeskFirst Published Sep 27, 2019, 8:27 AM IST
Highlights

ಮೇಯರ್ ಆಯ್ಕೆ, ಅಖಾಡಕ್ಕೆ ಮೋದಿ ಎಂಟ್ರಿ| ಬೆಂಗಳೂರು ಮಹಾನಗರದ ಅಭಿವೃದ್ಧಿ ಪರ ನಿಲುವು, ಕಾಳಜಿ ಇರುವವರನ್ನೇ ಪರಿಗಣಿಸಿ ಮೋದಿ ಸಂದೇಶ ರವಾನೆ ಬೆನ್ನಲ್ಲೇ ಬಿಜೆಪಿ ಶಾಸಕರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು[ಸೆ.27]: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐಟಿ ಸಿಟಿ ಬೆಂಗಳೂರಿನ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೂ ಆಸಕ್ತಿ ವಹಿಸಿದ್ದು, ಈ ಬಾರಿ ಬಿಜೆಪಿಗೆ ಮೇಯರ್ ಪಟ್ಟ ಸಿಗು ವುದಾದರೆ ಅಭಿವೃದ್ಧಿಪರ ನಿಲುವು ಹಾಗೂ ಕಾಳಜಿ ಹೊಂದಿರುವ ಸಮರ್ಥರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿ ಎಂಬ ಸಲಹೆಯನ್ನು ಆಡಳಿತಾರೂಢ ಬಿಜೆಪಿಯ ರಾಜ್ಯ ನಾಯಕರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿ

ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಮತ್ತು ಪಕ್ಷದ ನಾಯಕರು ಸಮರ್ಥ ಮೇಯರ್ ಅಭ್ಯರ್ಥಿಗಾಗಿ ಶೋಧನೆ ನಡೆಸಿದ್ದಾರೆ. ಜೊತೆಗೆ ಸಂಘ ಪರಿವಾರವೂ ಇದೇ ಮೊದಲ ಬಾರಿಗೆ ಮೇಯರ್ ಹುದ್ದೆಯ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದೆ ಎನ್ನಲಾಗಿದೆ.

ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಕಳೆದ ಹಲವು ವರ್ಷಗಳಲ್ಲಿ ತನ್ನ ಅಂದ ಕಳೆದುಕೊಂಡಿದೆ. ಅಭಿವೃದ್ಧಿ ಪಥದಿಂದ ದೂರ ಸರಿದು ನಿಂತಿದೆ. ಈ ಹಿಂದೆ ಆರು ವರ್ಷ ಕಾಲ ಸರ್ಕಾರದ ಚುಕ್ಕಾಣಿ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬೆಂಗಳೂರಿನ ಅಭಿ ವೃದ್ಧಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿರಲಿಲ್ಲ. ಹೀಗಾಗಿ, ಬೆಂಗಳೂರಿನ ಅಭಿವೃದ್ಧಿ ಸ್ಥಗಿತಗೊಂಡಿತ್ತು. ಇದೀಗ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಹೀಗಾಗಿ, ಅಭಿವೃದ್ಧಿಪರ ವ್ಯಕ್ತಿಯನ್ನು ಮೇಯರ್ ಆಗಿ ಮಾಡಿದಲ್ಲಿ ರಾಜ್ಯ ಸರ್ಕಾರದ ನೆರವು ಪಡೆದು ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲರು ಎಂಬ ಮಾತನ್ನು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ

ಖುದ್ದು ಸಿಎಂ ಬಿಎಸ್‌ವೈ ಮಧ್ಯಪ್ರವೇಶ: ಕಳೆದ ಸೋಮವಾರವಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ನಗರದ ಬಿಜೆಪಿ ಶಾಸಕರು ಹಾಗೂ ಸಂಸದರ ಸಭೆ ಕರೆದು ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದೀರ್ಘ ಸಭೆ ನಡೆಸಿದ್ದರು.

ಮೊದಲೆಲ್ಲ ಬಿಜೆಪಿಯ ಬೆಂಗಳೂರು ಮೇಯರ್- ಉಪಮೇಯರ್ ಅಥವಾ ಪ್ರಮುಖ ಬೆಳವಣಿಗೆಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಹೆಚ್ಚು ನಡೆಯುತ್ತಿದ್ದವು. ಆ ಭಾಗದ ಸಂಸದರು ಹಾಗೂ ಪ್ರಭಾವಿ ಶಾಸಕರೊಬ್ಬರು ಏನು ಹೇಳುತ್ತಾರೆಯೋ ಅದೇ ಅಂತಿಮವಾಗುತ್ತಿತ್ತು. ಜೊತೆಗೆ ಇತರ ರಾಜ್ಯ ನಾಯಕರೂ ಆ ಬಗ್ಗೆ ತಟಸ್ಥರಾಗಿರುತ್ತಿದ್ದರು.

ಆದರೆ, ಈ ಬಾರಿ ವಿಭಿನ್ನವಾಗಿದೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರೇ ಮುಂದಾಗಿ ಶಾಸಕರು ಹಾಗೂ ಸಂಸದರ ಸಭೆ ಕರೆದು ಉತ್ತಮ ವ್ಯಕ್ತಿಯೊಬ್ಬನನ್ನು ಮೇಯರ್ ಅಭ್ಯರ್ಥಿಗೆ ಆಯ್ಕೆ ಮಾಡಲು ಹಿರಿಯ ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿ ಎರಡು ದಿನಗಳ ಕಾಲ ಮೇಯರ್ ಅಭ್ಯರ್ಥಿಯ ಆಕಾಂಕ್ಷಿಗಳು ಹಾಗೂ ಇತರ ಎಲ್ಲ ಬಿಬಿಎಂಪಿ ಸದಸ್ಯರೊಂದಿಗೆ ಮಾತನಾಡಿ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಸಂಗ್ರಹಿಸಿತು.

ರಘು ನೇತೃತ್ವದ ಸಮಿತಿ ಮಾಹಿತಿ ಸಂಗ್ರ ಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಿ ನೀಡಿದೆ. ಆ ವರದಿಯನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಅವರು ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಚರ್ಚಿಸಿ ಬಿಬಿಎಂಪಿಯ ಸಮರ್ಥ ಅಭ್ಯರ್ಥಿಯೊಬ್ಬನನ್ನು ಆಯ್ಕೆ ಮಾಡಲಿದ್ದಾರೆ. ಸದ್ಯದ ಬೆಳವಣಿಗೆಗಳ ಪ್ರಕಾರ ಬಿಜೆಪಿಗೆ ಈ ಬಾರಿ ಮೇಯರ್ ಪಟ್ಟ ಸಿಗುವ ಸಂಭವ ಹೆಚ್ಚಾಗಿದೆ. ಹೀಗಾಗಿ, ಸಮರ್ಥರನ್ನು ಮೇಯರ್ ಸ್ಥಾನ ದಲ್ಲಿ ಕೂಡಿಸಿ ಅವರ ಬೆನ್ನಿಗೆ ರಾಜ್ಯ ಸರ್ಕಾರ ನಿಲ್ಲುವ ಮೂಲಕ ರಾಜಧಾನಿ ಬೆಂಗಳೂರಿನ ಸಮಗ್ರ ಬೆಳವಣಿಗೆಗೆ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ

ಈಗ ಸಮರ್ಥ ವ್ಯಕ್ತಿಯನ್ನು ಮೇಯರ್ ಮಾಡಿ ಅಭಿವೃದ್ಧಿಗೆ ಚಾಲನೆ ನೀಡಿದಲ್ಲಿ ಮುಂದಿನ ವರ್ಷ ಎದುರಾಗಲಿರುವ ಬಿಬಿಎಂ ಪಿಯ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಬಹುದು ಎಂಬ ಲೆಕ್ಕಾಚಾರವೂ ಆಡಳಿತಾರೂಢ ಬಿಜೆಪಿಯಲ್ಲಿ

click me!