ಡಿಕೆಶಿ ಭೇಟಿಯಾದ ಅಹ್ಮದ್ ಪಟೇಲ್, ಮಹತ್ವದ ಸಂದೇಶ ತಲುಪಿಸಿದ ಸೋನಿಯಾ ಆಪ್ತ!

By Web Desk  |  First Published Sep 27, 2019, 7:57 AM IST

ಡಿಕೆಶಿ ಭೇಟಿಯಾದ ಅಹ್ಮದ್‌ ಪಟೇಲ್ ಆನಂದ್‌ ಶರ್ಮಾ| ತಿಹಾರ್‌ ಜೈಲಿಗೆ ಡಿ.ಕೆ.ಸುರೇಶ್‌ ಜತೆ ತೆರಳಿದ ‘ಕೈ’ ನಾಯಕರು| ಹೈಕಮಾಂಡ್‌ ಬೆಂಬಲವಿದೆ ಎಂಬ ಸಂದೇಶ ರವಾನಿಸಿದ ನಾಯಕರು


ನವದೆಹಲಿ[ಸೆ.27]: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಹ್ಮದ್‌ ಪಟೇಲ್ ಮತ್ತು ಆನಂದ್‌ ಶರ್ಮಾ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ.

'ಡಿಕೆಶಿಗೆ ತಾಕತ್ತಿರಬಹುದು, ಅತಿಮಾನುಷ ಶಕ್ತಿ ಇಲ್ಲ'..!

Latest Videos

ಗುರುವಾರ ಡಿ.ಕೆ. ಶಿವಕುಮಾರ್‌ ಅವರ ಸೋದರ ಡಿ.ಕೆ. ಸುರೇಶ್‌ ಜೊತೆ ತಿಹಾರ್‌ ಜೈಲಿಗೆ ತೆರಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಅಹ್ಮದ್‌ ಪಟೇಲ್ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕ ಆನಂದ್‌ ಶರ್ಮಾ ಅವರು ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ಹೋರಾಟವನ್ನು ಕಾಂಗ್ರೆಸ್‌ ಬೆಂಬಲಿಸಲಿದೆ ಎಂಬ ಸಂದೇಶವನ್ನು ತಲುಪಿಸಿದ್ದಾರೆ.

ತಿಹಾರ್‌ ಜೈಲು ತನಕ ಅಹ್ಮದ್‌ ಪಟೇಲ್ ಮತ್ತು ಆನಂದ್‌ ಶರ್ಮಾ ಅವರು ಡಿ.ಕೆ.ಸುರೇಶ್‌ ಅವರ ವಾಹನದಲ್ಲೇ ಆಗಮಿಸಿದರು. ಡಿ.ಕೆ. ಶಿವಕುಮಾರ್‌ ಜೊತೆ ಸುಮಾರು ಅರ್ಧ ಗಂಟೆ ಈ ನಾಯಕರು ಮಾತುಕತೆ ನಡೆಸಿದರು.

ED ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ: ಜೈಲು ಮುಕ್ತರಾಗಲು ಡಿಕೆಶಿ ಮುಂದಿರುವ ಆಯ್ಕೆಗಳೇನು?

ಜಾಮೀನು ಕೋರಿ ಡಿಕೆಶಿ ಹೈ ಕೋರ್ಟ್‌ಗೆ ಅರ್ಜಿ

ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ ಮರುದಿನವೇ ಡಿ.ಕೆ.ಶಿವಕುಮಾರ್‌ ಪರ ವಕೀಲರು ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ದಾಖಲಿಸಿದ್ದಾರೆ. ಗುರುವಾರ ಡಿ.ಕೆ.ಶಿವಕುಮಾರ್‌ ಪರ ವಕೀಲ ಮಾಯಾಂಕ್‌ ಜೈನ್‌ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮಾಜದ ಹಿತಾಸಕ್ತಿ ಮುಖ್ಯ. ಅವರು ಗಂಭೀರ ಆರೋಪ ಎದುರಿಸುತ್ತಿರುವ ಸಂದರ್ಭದಲ್ಲಿ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟು ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ, ಡಿಕೆಶಿ ಹೈಕೋರ್ಟ್‌ ಕದಬಡಿದಿದ್ದಾರೆ.

ಡಿಕೆಶಿಗಿಲ್ಲ ಜಾಮೀನು: ತಿಹಾರ್ ಜೈಲು ವಾಸ ಮುಂದುವರಿಕೆ

ಜಾರಿ ನಿರ್ದೇಶನಾಲಯ(ಇ.ಡಿ.)ದ ನಿರ್ದೇಶಕರನ್ನು ಹೊರತು ಪಡಿಸಿ ಇತರ ಅಧಿಕಾರಿಗಳ ಮುಂದೆ ಶಿವಕುಮಾರ್‌ ನೀಡಿರುವ ಹೇಳಿಕೆಗೆ ಸಾಕ್ಷ್ಯದ ಗುಣವಿಲ್ಲ ಎಂದು ಶಿವಕುಮಾರ್‌ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ. ಪ್ರಕರಣದ ತೀರ್ಪನ್ನು ಹೈಕೋರ್ಟ್‌ ಕಾದಿರಿಸಿದೆ.

click me!