ನನ್ನನ್ನೇ ಮುಖ್ಯಮಂತ್ರಿ ಮಾಡಿ : ರಾಜ್ಯಪಾಲರಿಗೆ ರೈತನ ಪತ್ರ

By Kannadaprabha News  |  First Published Nov 2, 2019, 10:13 AM IST

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಮುಗಿಯದ ಕತೆ ಎನ್ನಿಸತೊಡಗಿದೆ. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು 8 ದಿವಸಗಳಾದರೂ  ಸರ್ಕಾರ ರಚನೆ ಸಾಧ್ಯವಾಗಿಲ್ಲ.  ಸರ್ಕಾರ ರಚನೆ ವಿಳಂಬ ಹಿನ್ನೆಲೆ  ರೈತನೊಬ್ಬ ವಿಶಿಷ್ಟ ರೀತಿಯಲ್ಲಿ ಪ್ರಶ್ನಿಸಿದ್ದಾರೆ


ಬೀಡ್ (ಮಹಾರಾಷ್ಟ್ರ): ಬಿಜೆಪಿ-ಶಿವಸೇನೆ ನಡುವೆ ಅಧಿಕಾರ ಹಂಚಿಕೆ ಕಿತ್ತಾಟ ಮುಗಿಯದ ಕತೆ ಎನ್ನಿಸತೊಡಗಿದ್ದು, ಜನಾಕ್ರೋಶ ವ್ಯಕ್ತವಾಗಲು ಆರಂಭವಾಗಿದೆ. ರಾಷ್ಟ್ರಪತಿ ಆಡಳಿತದ ಬಗ್ಗೆಯೂ ಚರ್ಚೆ ಶುರುವಾಗಿದೆ

ಸರ್ಕಾರ ರಚನೆ ವಿಳಂಬ ಹಿನ್ನೆಲೆ  ರೈತನೊಬ್ಬ ವಿಶಿಷ್ಟ ರೀತಿಯಲ್ಲಿ ಪ್ರಶ್ನಿಸಿದ್ದು, ‘ಹೊಸ ಸರ್ಕಾರ ರಚನೆಯಾಗುವ ತನಕ ನನ್ನನ್ನೇ ಮುಖ್ಯಮಂತ್ರಿ ಮಾಡಿ’ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾನೆ.

Latest Videos

undefined

ದೇವೇಂದ್ರನೂ ಬೇಡ, ಆದಿತ್ಯನೂ ಬೇಡ ಮಹಾರಾಷ್ಟ್ರದ ಸಿಎಂ ಆಗಿ ಅನಿಲ್ ಕಪೂರ್!...

 ಶ್ರೀಕಾಂತ ವಿಷ್ಣು ಗದಳೆ ಎಂಬಾತ ಅಕ್ಟೋಬರ್ 31ರಂದು ಬರೆದ ಪತ್ರದಲ್ಲಿ, ‘ಇತ್ತೀಚಿನ ಅತಿವೃಷ್ಟಿ ಕಾರಣ ರೈತರ ಬೆಳೆಗಳು ಹಾಳಾಗಿವೆ. ಹೀಗಾಗಿ ರೈತರ ಸಮಸ್ಯೆ ಆಲಿಸಲು ತುರ್ತಾಗಿ ಸರ್ಕಾರ ರಚನೆ ಆಗಬೇಕು. ಹೀಗಾಗಿ ಶಿವಸೇನೆ-ಬಿಜೆಪಿ ಭಿನ್ನಮತ ಬಗೆಹರಿಯುವ ತನಕ ನನ್ನನ್ನೇ ಮುಖ್ಯಮಂತ್ರಿ ಮಾಡಿ’ ಎಂದು ಆಗ್ರಹಿಸಿದ್ದಾನೆ. 

ನ.07ಕ್ಕೆ ಸರ್ಕಾರ ಆಗ್ದಿದ್ರೆ ರಾಷ್ಟ್ರಪತಿ ಆಡಳಿತ: ಬಿಜೆಪಿ ನಾಯಕನ ಹೊಸ ವರಾತ!...

ಈತನ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಅಧಿಕಾರ ಕಿತ್ತಾಟ ನಡೆಸಿರುವ ಪಕ್ಷಗಳ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ.

(ಸಾಂದರ್ಬಿಕ ಚಿತ್ರ)

click me!