ಸರ್ಕಾರದಿಂದ ಶೌಚಾಲಯ ನೀಡಿದ್ರೂ ಬಳಸುತ್ತಿಲ್ಲವೇ ಎಚ್ಚರ. ಬಯಲು ಶೌಚಕ್ಕೆ ಹೋದ್ರೆ ರೇಷನ್ ಕಟ್ ಆಗುತ್ತೆ!
ಬೆಹ್ರಾಂಪುರ[ನ.02]: ಶೌಚಾಲಯ ಬಳಸದೇ ಬಯಲು ಶೌಚಕ್ಕೆ ಅಂಟಿಕೊಂಡಿದ್ದಾರೆನ್ನುವ ಕಾರಣಕ್ಕಾಗಿ ಪಂಚಾಯತ್ ಆಡಳಿತ 20 ಕುಟುಂಬಗಳಿಗೆ ಪಡಿತರ ಹಂಚಿಕೆ ನಿಲ್ಲಿಸಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಗೌತಮಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಪಂಚಾಯತ್ ಸಭೆಯಲ್ಲಿ ತೀರ್ಮಾನಿಸಿದಂತೆ ಕಳೆದ 11 ದಿನಗಳಿಂದ ರೇಷನ್ ನೀಡಲಾಗಿಲ್ಲ. ಶೌಚಾಲಯಗಳನ್ನು ಬಳಸಿ ಎಂದು ಹೇಳಿದ ಬಳಕವೂ ಬಯಲು ಶೌಚಕ್ಕೆ ಹೋಗುವುದು ಮುಂದುವರಿಸಿದ್ದರು.
ಇದೇನು ಅಚ್ಚರಿ! ದೆಹಲಿಯಲ್ಲಿ ಟಾಯ್ಲೆಟ್ ಗಾಗಿಯೇ ಇದೆ ಒಂದು ಮ್ಯೂಸಿಯಂ!...
ಯಾವುದೇ ರೀತಿಯ ಸೂಚನೆಗಳನ್ನು ನೀಡಿದ್ದರೂ ಸಹ ರಸ್ತೆ ಪಕ್ಕದಲ್ಲೇ ಶೌಚಕ್ಕೆ ಹೋಗಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೇಷನ್ ನಿಲ್ಲಿಸಲು ತೀರ್ಮಾನಿಸಲಾಯಿತು ಎಂದು ಗ್ರಾಪಂ ಸದಸ್ಯ ಸುಶಾಂತ್ ಸ್ವೈನ್‌ತಾ ತಿಳಿಸಿದ್ದಾರೆ.