
ನವದೆಹಲಿ(ಜು.24): ನಾಳೆ ಭಾರತದ ನೂತನ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ರಾಮನಾಥ್ ಕೋವಿಂದ್, ಸರಳತೆಯಲ್ಲಿ ದೇಶಕ್ಕೇ ಆದರ್ಶಪ್ರಾಯರಾಗಿದ್ದಾರೆ. ಅವರಂತೆಯೇ ಅವರ ಪುತ್ರಿ ಕೂಡ ಸರಳತೆಯುತ್ತಿದ್ದಾರೆ. ತಂದೆ ಎಷ್ಟೇ ಉನ್ನತ ಹುದ್ದೆ ಏರಿದರೂ, ತಂದೆಯ ಹುದ್ದೆಯ ಅಮಲಿನಲ್ಲಿ ತೇಲದೆ, ಸಾಮಾನ್ಯ ಮಹಿಳೆಯಂತೆ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರ ಪುತ್ರಿ ಸ್ವಾತಿ,ಏರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಪರಿಚಾರಿಕೆಯಾಗಿ ಕೆಲಸಮಾಡುತ್ತಿದ್ದಾರೆ. ಆಸ್ಟ್ರೇಲಿಯಾ, ಯೂರೋಪ್, ಅಮೆರಿಕಾ ದೇಶಗಳಿಗೆ ಬೋಯಿಂಗ್ 777, 787 ವಿಮಾನಗಳಲ್ಲಿ ಸ್ವಾತಿ ಏರ್ ಹೋಸ್ಟೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆಂದೂ ತಾನು ರಾಮ್ ನಾಥ್ ಕೋವಿಂದ್ ರವರ ಪುತ್ರಿಯೆಂದು ಯಾರಿಗೂ ತಿಳಿಸಿರಲಿಲ್ಲ. ಸಾಮಾನ್ಯ ಉದ್ಯೋಗಿಯಂತೆ ವರ್ತಿಸುತ್ತಿದ್ದಾರೆ ಹೊರತು, ತನ್ನನ್ನು ತಾನು ಹೊಗಳಿಕೊಳ್ಳುತ್ತಿರಲಿಲ್ಲ. ಹಾಗಾಗಿ ಆಕೆಯ ಸಹೋದ್ಯೋಗಿಗಳು ಕೂಡ ಸ್ವಾತಿ ಗುಣವನ್ನು ಕಂಡು ಅಚ್ಚರಿಗೊಳ್ಳುವ ಜೊತೆಗೆ, ಮೆಚ್ಚೆಕೊಂಡಿದ್ದಾರೆ. ಸ್ವಾತಿ ನಡತೆಯನ್ನು ಕಂಡು ಹೆಮ್ಮೆಪಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.