
ನವದೆಹಲಿ(ಸೆ.09): ಬಡ ಹಾಗೂ ಮಧ್ಯಮ ವರ್ಗದವರ ಜೀವನಾಡಿಯಾಗಿದ್ದ ರೈಲು ಪ್ರಯಾಣ ಕೂಡ ನಾಳೆಯಿಂದ ಭಾರೀ ದುಬಾರಿಯಾಗಲಿದೆ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆ ಕ್ರಿಯಾತ್ಮಕ ಪ್ರಯಾಣ ದರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ರಾಜಧಾನಿ, ಶತಾಬ್ಧಿ ಎಕ್ಸ್ ಪ್ರೆಸ್ ಮತ್ತು ಡುರಂಟೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಶೇ.10 ರಿಂದ ಶೇ.50 ರಷ್ಟು ಹೆಚ್ಚು ಹಣ ತೆರಬೇಕಾಗುತ್ತದೆ. ಆದರೆ ಪ್ರಥಮ ದರ್ಜೆ ಹವಾನಿಯಂತ್ರಿತ ಮತ್ತು ಎಕ್ಸಿಕ್ಯೂಟಿವ್ ಶ್ರೇಣಿಗಳಿಗೆ ಈಗ ಇರುವ ದರವೇ ಅನ್ವಯವಾಗಲಿದೆ. ರೈಲ್ವೆ ಟಿಕೆಟ್ ದರ ಏರಿಕೆಯ ಆದೇಶವನ್ನು ನರೇಂದ್ರ ಮೋದಿ ಆಡಳಿತದ ತುಘಲಕ್ ಆದೇಶ ಎಂದು ಕಾಂಗ್ರೆಸ್ ಪಕ್ಷ ಕರೆದಿದೆ. ಕೂಡಲೇ ಈ ನಿರ್ಣಯವನ್ನು ಹಿಂಪಡೆಯುವುದಕ್ಕೆ ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.