ದನದ ಶವ ವಿಲೇವಾರಿಗೆ ನಿರಾಕರಿಸಿದ ಗರ್ಭಿಣಿಗೆ ಥಳಿತ!

By Internet Desk  |  First Published Sep 26, 2016, 3:19 AM IST

ಗುಜರಾತ್(ಸೆ.26): ದನದ ಶವ ವಿಲೇವಾರಿ ಮಾಡಲು ನಿರಾಕರಿಸಿದ್ದಕ್ಕೆ ಗರ್ಭಿಣಿ ಮಹಿಳೆ ಸೇರಿದಂತೆ ದಲಿತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಗುಜರಾತ್'ನ ಬನ್ಸಾಕಾಂತಾ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ದರ್ಬಾರ್ ಸಮುದಾಯಕ್ಕೆ ಸೇರಿದ್ದ ಸುಮಾರು 10 ಮಂದಿ ಏಕಾಏಕಿ ಮನೆನುಗ್ಗಿ, ಗರ್ಭಿಣಿ ಸಂಗೀತಾ ಸೇರಿದಂತೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿದೆ. ದನದ ಶವವನ್ನು ವಿಲೇವಾರಿ ಮಾಡಲು ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.

Tap to resize

Latest Videos

ಇತ್ತೀಚೆಗೆ ಉನಾದಲ್ಲಿ ದನದ ಮಾಂಸ ಸುಲಿಯುತ್ತಿದ್ದರು ಎಂದು ಆರೋಪಿಸಿ ಗೂಂಡಾಗಳ ಗುಂಪೊಂದು ಹಲ್ಲೆ ಮಾಡಿತ್ತು.. ಈಗ, ವಿಲೇವಾರಿ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ.

click me!