
ಬೆಂಗಳೂರು(ಸೆ.26): ಬೆಂಗಳೂರಿನಲ್ಲಿ ಮಗನಿಂದಲೇ ತಂದೆಯ ಹತ್ಯೆಯಾಗಿದೆ. ರಾಜಗೋಪಾಲ ನಗರದ ದುಗಲಾಂಬಾ ದೇವಸ್ಥಾನದ ಬಳಿ ಘಟನೆ ಈ ಘಟನೆ ನಡೆದಿದ್ದು, ಕೊಲೆಯಾದ ತಂದೆಯನ್ನು ರಾಜಪ್ಪ ಎಂದು ಗುರುತಿಸಲಾಗಿದೆ.
ಈತನ ಪುತ್ರ 19 ವರ್ಷದ ಮಗ ಹರೀಶ್ ಎಂಬಾತ ಕೊಲೆ ಮಾಡಿದ್ದಾನೆ. ತಂದೆ ರಾಜಪ್ಪ ಪ್ರತಿನಿತ್ಯ ಕುಡಿದು ಬರುತ್ತಿದ್ದ. ಇದರಿಂದ ಮಗ ಬೇಸತ್ತಿದ್ದ, ಅಲ್ಲದೇ ನಿನ್ನೆ ರಾತ್ರಿ ಕುಡಿದು ಬಂದು ಹೆಂಡತಿ ನಾಗಮ್ಮಳನ್ನು ಹೊಡೆದಿದ್ದ. ನಂತರ ನಾಗಮ್ಮಳನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಹರಿಶ್ ದಾಖಲಿಸಿದ್ದ.
ಆಸ್ಪತ್ರೆಯಿಂದ ಮನೆಗೆ ಬಂದ ಪುತ್ರ ಹರೀಶ್, ಮಲಗಿದ್ದ ರಾಜಪ್ಪನನ್ನು ಮಾರಾಕಾಸ್ತ್ರದಿಂದ ಹತ್ಯೆ ಮಾಡಿದ್ದಾನೆ. ಹರೀಶ್'ನನ್ನು ಬಂಧಿಸಿರುವ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.