
ಮುಂಬೈ(ಆ.27): ಭದ್ರತಾ ಠೇವಣಿ 1500ರೂ.ನೊಂದಿಗೆ ಉಚಿತವಾಗಿ ವಿತರಿಸಲಾಗುವ ಜಿಯೊ ಫೋನ್‌ಗೆ ಗ್ರಾಹಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ ವೆಬ್‌ಸೈಟ್ ಮೂಲಕ ತಾತ್ಕಾಲಿಕ ನಿರ್ಬಂಧ ಹೇರಿ ಗ್ರಾಹಕರಿಗೆ ಶಾಕ್ ನೀಡಲಾಗಿದೆ. ಆ.24 ಸಂಜೆ 5.30ರ ನಂತರ ವೆಬ್'ಸೈಟ್'ನಲ್ಲಿ ಯಾವುದೇ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಬುಕ್ ಮಾಡಲು ಹೋದರೆ ಶೀಘ್ರದಲ್ಲಿಯೇ ಕಾಯ್ದಿರಿಸುವ ದಿನಾಂಕವನ್ನು ತಿಳಿಸುತ್ತೇವೆ ಎಂದು ಸಂದೇಶ ಬರುತ್ತದೆ.
ಜಿಯೊ ಫೋನ್ ಅನ್ನು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ಕಾಯ್ದಿರಿಸಿದ್ದಾರೆ. ಲಕ್ಷಾಂತರ ಜನ ವೆಬ್'ಸೈಟ್ ಓಪನ್ ಮಾಡಿದ ಕಾರಣ ಕೆಲ ಗಂಟೆಗಳ ಕಾಲ ವೆಬ್‌ಸೈಟ್‌ನ ಸರ್ವರ್ ಡೌನ್ ಆಗಿತ್ತು.
ಫೋನ್'ನಲ್ಲಿರುವ ಫೀಚರ್'ಗಳು
ಸ್ಕ್ರೀನ್: 2.4 ಇಂಚ್
ಸಂಪರ್ಕ: 4ಎಲ್'ಟಿಇ ಬ್ಯಾಂಡ್ ಹಾಗೂ 3,5,40
ಒಎಸ್: ಕೆಎಐ ಒಎಸ್
ರಾಮ್: 512 ಎಂಬಿ
ಫ್ಲ್ಯಾಶ್: 4ಜಿಬಿ
ಎಸ್'ಡಿ ಕಾರ್ಡ್: 128 ಜಿಬಿ
ಸಿಮ್: ಒಂದು ಸಿಮ್ ಮಾತ್ರ
ಫ್ರೆಂಟ್ ಕ್ಯಾಮೆರಾ: ವಿಜಿಎ
ರೇರ್ ಕ್ಯಾಮರಾ: 2 ಎಂಪಿ
ಬ್ಯಾಟರಿ: Li-ion 3.7V 2000 mAh
ಬ್ಲೂಟೂತ್: 4.1+ಬಿಎಲ್'ಇ
ಎಫ್'ಎಂ: ಇಂಟಿಗ್ರೇಟೆಡ್
ಆಡಿಯೋ: 2030 ಅಥವಾ ಸಮಾನವಾದ ಲೌಡ್ ಮೋನೊ ಸ್ಪೀಕರ್
ವೊವೈಫೈ'ಗಾಗಿ ವೈಫೈ ಸಪೋರ್ಟ್ ಹಾಗೂ ಡಾಟಾ ಆಫ್'ಲೋಡ್
ಜಿಪಿಎಸ್ ಸಪೋರ್ಟ್
MIMO
PIMS(Contacts, Messages, Setting, Camera, Photos, Music, Calendar, FM, Browser, Video, File Manager, Notes, Calculator, Clock, Games etc)
VoLTE ಹಾಗೂ ವಿಡಿಯೋ ಕಾಲಿಂಗ್
ಭಾರತೀಯ 14 ಭಾಷೆಗಳನ್ನು ಬೆಂಬಲ ನೀಡುತ್ತದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.