
ಸುವರ್ಣ ನ್ಯೂಸ್ನ ವಿನೂತನ ಮತ್ತು ವಿಭಿನ್ನ ಪ್ರಯತ್ನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ 2ನೇ ಬಾರಿಗೆ ಅತಿಥಿಯಾಗಿ ಬಂದಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಕೆಲವೊಂದು ಸಮಸ್ಯೆಗಳನ್ನು ಸ್ಟುಡಿಯೋದಿಂದಲೇ ಬಗೆಹರಿಸಿದರು.
ಶಿಕಾರಿಪುರದಿಂದ ಅರುಣ್ ಎಂಬುವರು ಕರೆ ಮಾಡಿ ಮುರಾರ್ಜಿ ವಸತಿ ಶಾಲೆಯಲ್ಲಿ ಕೆಲಸ ಖಾಯಂಗೊಳಿಸುವಂತೆ ಮಾಡಿದ ಮನವಿಗೆ ಸಚಿವರು ಸ್ಪಂದಿಸಿದರು. ಇನ್ನು ರಾಮನಗರದಿಂದ ಕರೆ ಮಾಡಿದ್ದ ನಾಗೇಶ್, ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು. ದಾವಣಗೆರೆಯಿಂದ ಮಂಜಪ್ಪ ಎಂಬುವರು ನಿಟ್ಟುವಳ್ಳಿ ಬಡಾವಣೆಯ ಮುರಾರ್ಜಿ ಕಾಲೇಜಿನ ಹಾಸ್ಟೆಲ್ನಲ್ಲಿ, ವಾರ್ಡನ್ ಕಾರಣವಿಲ್ಲದೇ ಸರಣಿ ರಜೆ ನೀಡಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಎಸ್‌ಸಿ-ಎಸ್‌ಟಿ ವರ್ಗಕ್ಕೆ ವಿಶೇಷ ಕಂಟ್ರೋಲ್ ರೂಂ : ದೂರವಾಣಿ ಸಂಖ್ಯೆ - 9901100000, 080-22634300
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮೇಲಿನ ಈ ನಂಬರ್‌ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಅಂತಾ ಸಚಿವರು ಹೇಳಿದರು. ಒಟ್ಟಿನಲ್ಲಿ ಸಚಿವರು ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು. ಅಲ್ಲದೆ ಸುವರ್ಣನ್ಯೂಸ್‌ನ ವಿಭಿನ್ನ ಕಾರ್ಯಕ್ರಮಕ್ಕೆ ಧನ್ಯವಾದ ಕೂಡ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.