ಆಕ್ರೋಶ್ ದಿನ ಅಲ್ಲ, ಅದು ಹತಾಶೆಯ ದಿನ: ಪ್ರತಾಪ್ ಸಿಂಹ

Published : Nov 27, 2016, 08:13 AM ISTUpdated : Apr 11, 2018, 12:59 PM IST
ಆಕ್ರೋಶ್ ದಿನ ಅಲ್ಲ, ಅದು ಹತಾಶೆಯ ದಿನ: ಪ್ರತಾಪ್ ಸಿಂಹ

ಸಾರಾಂಶ

ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಬಸ್ ಮತ್ತು ಸರಕಾರಿ ಕಚೇರಿಗಳನ್ನು ಮುಚ್ಚಲು ಹೊರಟಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.

ಬೆಂಗಳೂರು(ನ. 27): ನೋಟ್ ಬ್ಯಾನ್ ನಿರ್ಧಾರವನ್ನು ಪ್ರಶ್ನಿಸಿ ನಾಳೆ ಆಕ್ರೋಶ್ ದಿನ್ ಆಚರಣೆಗೆ ಕರೆಕೊಟ್ಟಿರುವ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಮುಖಂಡರು ತೀವ್ರವಾಗಿ ಟೀಕಿಸಿದ್ದಾರೆ. ಪ್ರತಾಪ್ ಸಿಂಹ ಅವರಂತೂ ಇದನ್ನು ಹತಾಶೆಯ ದಿನವೆಂದು ಬಣ್ಣಿಸಿದ್ದಾರೆ. ಕಪ್ಪುಹಣ ಇಟ್ಟುಕೊಂಡವರಿಗೆ ನೋಟು ನಿಷೇಧದಿಂದ ತೊಂದರೆಯಾಗಿದೆ. ನ.8ರ ರಾತ್ರಿಯಿಂದಲೇ ದೇಶಾದ್ಯಂತ ಸಂಭ್ರಮದ ದಿನಗಳು ಆರಂಭವಾಗಿವೆ ಎಂದು ಮೈಸೂರಿನ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಬಸ್ ಮತ್ತು ಸರಕಾರಿ ಕಚೇರಿಗಳನ್ನು ಮುಚ್ಚಲು ಹೊರಟಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ಸಾರ್ವಜನಿಕರ ಬೆಂಬಲವೇ ಇಲ್ಲದೆ ನಡೆಯುವ ನಾಳೆಯ ಭಾರತ್ ಬಂದ್ ವಿಫಲವಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದರಾಮಯ್ಯ ಮುಡಾ ಕೇಸ್, ತನಿಖಾಧಿಕಾರಿಗಳು ಸರ್ವಾಧಿಕಾರಿಗಳೇ? ಕೋರ್ಟ್‌ ನಲ್ಲಿ ಸ್ನೇಹಮಯಿ ಕೃಷ್ಣ ಕೆಂಡಾಮಂಡಲ!
ಲೇಡಿ ಬಾಸ್​ ಎಲ್ಲೆಲ್ಲೋ ಮುಟ್ಟುತ್ತಾಳೆ, ಪ್ರಚೋದಿಸ್ತಾಳೆ, ಆಮೇಲೆ... ಉದ್ಯೋಗಿಯಿಂದ ಶಾಕಿಂಗ್​ ವಿಷ್ಯ ರಿವೀಲ್​