
ಪಣಜಿ: ಬಡವರು ಕೂಡಾ ಶುಚಿತ್ವ ಕಾಪಾಡಬೇಕು, ಅದಕ್ಕೆ ಹೆಚ್ಚು ಹಣ ಖರ್ಚಾಗುವುದಿಲ್ಲವೆಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೇಳಿದ್ದಾರೆ.
ನಾವು ಶುಚಿಯಾಗಿರಬೇಕು, ಬಡವರು ಕೂಡಾ ಶುಚಿಯಾಗಿರಬೇಕು. ಅದಕ್ಕೆ ಹೆಚ್ಚೇನೂ ಹಣದ ಅಗತ್ಯವಿಲ್ಲ. ಸರಳವಾಗಿರುವ ವಿಷಯಗಳನ್ನು ಸುಲಭವಾಗಿ ಮಾಡಬಹುದು, ಎಂದು ಆರೋಗ್ಯ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪರ್ರಿಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಟೀಕಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪರ್ರಿಕರ್, ಗೋವಾದಲ್ಲಿ ಪ್ರತಿನಿತ್ಯ 25 ಪತ್ರಿಕಾಗೋಷ್ಠಿ ನಡೆಯುತ್ತಿವೆಯೆಂದು ಪೊಲೀಸ್ ವರದಿ ತಿಳಿಸುತ್ತದೆ. ಕೆಲವರಿಗೆ ಬರೇ ಟೀಕಿಸುವ ಚಾಳಿ. ಯಾರು, ಏನಕ್ಕೆ ಈ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ ಎಂದು ಯಾರಿಗೂ ತಿಳಿದಿಲ್ಲ, ಎಂದು ಪರ್ರಿಕರ್ ಹೇಳಿದ್ದಾರೆ.
ಇತ್ತೀಚೆಗೆ, ಹುಡುಗಿಯರು ಕೂಡಾ ಬಿಯರ್ ಕುಡಿಯಲಾರಂಭಿಸಿರುವುದು ನೋಡಿ ಗಾಬರಿಯಾಗುತ್ತಿದೆ ಎಂದು ಹೇಳುವ ಮೂಲಕ ಪರ್ರಿಕರ್, ಭಾರೀ ಟೀಕೆಗೊಳಗಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.