ರಸ್ತೆ ಮಂಜೂರಾಗಿದ್ದು ಗ್ರಾಮೀಣ ಭಾಗಕ್ಕೆ, ನಿರ್ಮಾಣವಾಗಿದ್ದು ರಾಜಕಾರಣಿ ಮನೆ ದಾರಿ

Published : Feb 09, 2017, 02:38 AM ISTUpdated : Apr 11, 2018, 01:02 PM IST
ರಸ್ತೆ ಮಂಜೂರಾಗಿದ್ದು ಗ್ರಾಮೀಣ ಭಾಗಕ್ಕೆ, ನಿರ್ಮಾಣವಾಗಿದ್ದು ರಾಜಕಾರಣಿ ಮನೆ ದಾರಿ

ಸಾರಾಂಶ

ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲೆಂದೇ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿವೆ. ಆದರೆ ಆ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿವೆಯಾ ಎಂಬುದೇ ಯಕ್ಷ ಪ್ರಶ್ನೆ. ಇಲ್ಲೊಬ್ಬ ರಾಜಕಾರಣಿ ಗ್ರಾಮೀಣ ಭಾಗಕ್ಕೆ ಮಂಜೂರಾದ ರಸ್ತೆಯನ್ನ ತನ್ನ ಮನೆಗೆ ಹೋಗುವ ದಾರಿಯಲ್ಲಿ  ಮಾಡಿಸಿಕೊಂಡಿದ್ದಾನೆ  ಎಂಬ ಆರೋಪ ಕೇಳಿ ಬಂದಿದೆ. ಯಾರು ಆ ರಾಜಕಾರಣಿ, ಏನಿದು ಗೋಲ್ ಮಾಲ್ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ರಾಯಚೂರು(ಫೆ.09): ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲೆಂದೇ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿವೆ. ಆದರೆ ಆ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿವೆಯಾ ಎಂಬುದೇ ಯಕ್ಷ ಪ್ರಶ್ನೆ. ಇಲ್ಲೊಬ್ಬ ರಾಜಕಾರಣಿ ಗ್ರಾಮೀಣ ಭಾಗಕ್ಕೆ ಮಂಜೂರಾದ ರಸ್ತೆಯನ್ನ ತನ್ನ ಮನೆಗೆ ಹೋಗುವ ದಾರಿಯಲ್ಲಿ  ಮಾಡಿಸಿಕೊಂಡಿದ್ದಾನೆ  ಎಂಬ ಆರೋಪ ಕೇಳಿ ಬಂದಿದೆ. ಯಾರು ಆ ರಾಜಕಾರಣಿ, ಏನಿದು ಗೋಲ್ ಮಾಲ್ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ಇದು ರಾಜಕಾರಣಿಯೇ ರಸ್ತೆ ನುಂಗಿದ ಕಥೆ. ರಾಯಚೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಜನರ ಜೀವನಮಟ್ಟ   ಸುಧಾರಣೆಗೆಂದು ರಾಜ್ಯ ಸರ್ಕಾರ  ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ೨೫ ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆಯನ್ನು ೨೦೧೫ ರಲ್ಲಿ ಮಂಜೂರು ಮಾಡಿತ್ತು. ಆದ್ರೆ ಈ ರಸ್ತೆ ಆಗಬೇಕಾಗಿದ್ದು ರಾಯಚೂರು ತಾಲ್ಲೂಕಿನ ಮಲಿಯಾಬಾದ್ ಹೋಗುವ ದಾರಿಯಲ್ಲಿ. ಆದರೆ ರಸ್ತೆ ಆಗಿದ್ದು  ವಿಧಾನಪರಿಷತ್ತು ಸದಸ್ಯ ಕಾಂಗ್ರೆಸ್ ಹಿರಿಯ ಮುಖಂಡ ಎನ್.ಎಸ್.ಭೋಸರಾಜ್ ಅವರ ಒಡೆತನಕ್ಕೆ ಸೇರಿದ ನಿವೇಶನ ಹಾಗೂ ಸಂಸ್ಥೆಗೆ ಹೋಗುವ ದಾರಿಯಲ್ಲಿ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನು ಇಂಟ್ರೆಸ್ಟಿಂಗ್ ಸಂಗತಿ ಎಂದರೆ, ಈ ರಸ್ತೆಯನ್ನು  ಸರ್ಕಾರಕ್ಕೆ ೨೦೧೪ ರಲ್ಲೇ ಮನವಿ ಸಲ್ಲಿಸಿ ಮಂಜೂರು ಮಾಡಿಸಿಕೊಂಡಿದ್ದು ಇದೇ ಎಮ್ಮೆಲ್ಸಿ ಎನ್.ಎಸ್.ಭೋಸರಾಜ್'ರವರೇ, ಆದ್ರೆ ಪ್ರಸ್ತಾವನೆಯಲ್ಲಿ ತಾಲ್ಲೂಕಿನ ಮಲಯಾಬಾದ್ ಗೆ ಹೋಗುವ ರಸ್ತೆ ಅಂತ ತಿಳಿಸಿ ದಿನಾಂಕ ೩೦-೦೭-೨೦೧೫ ರಂದು ೨೫ ಲಕ್ಷ ವೆಚ್ಚದ ಕಾಮಗಾರಿಗೆ ಅನುಮೋದನೆ ಪಡೆದಿದ್ದಾರೆ. ಆದ್ರೆ ಎಲ್ಲ ಪಂಚಾಯತ್ ರಾಜ್  ಅಧಿಕಾರಿಗಳು ಸೇರಿಕೊಂಡು ಬೋಸರಾಜ್ ಅವ್ರು ಹಿತ ಕಾಯುವುದಕ್ಕೋಸ್ಕರ ಅತ್ಯಂತ ಗ್ರಾಮೀಣ ಪ್ರದೇಶವಾದ ಮಲಿಯಾಬಾಸ್ ಗೆ ಹೋಗುವ ರಸ್ತೆ ಕಾಮಗಾರಿಯನ್ನ ಅನುಷ್ಠಾನಗೊಳಿಸದೇ ಸರ್ಕಾರದ ಆದೇಶಗಳನ್ನೇ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿವೆ.

ಒಟ್ಟಿನಲ್ಲಿ  ಗ್ರಾಮಗಳ ಉದ್ಧಾರದ ಹೆಸರಿನಲ್ಲಿ  ಹಣ ಬಿಡುಗಡೆ ಮಾಡಿಸಿಕೊಂಡು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರೋ ಇಂತಹ ರಾಜಕಾರಣಿಗಳಿಗೆ ತಕ್ಕ  ಪಾಠ ಕಲಿಸಬೇಕಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಕುಂಟುನೆಪ ಹೇಳಂಗಿಲ್ಲ, ಈ ದೇಶಗಳ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯ! ಭಾರತದಲ್ಲಿ ಇದು ಜಾರಿಯಾದ್ರೆ?