
ಪ್ರಧಾನಿ ಮೋದಿ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಸೊನ್ನೆ ಕೊಟ್ಟಿದ್ದಾರೆ:
ಇಂದಿನ ಬಜೆಟ್’ನಲ್ಲಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಸೊನ್ನೆ ಕೊಟ್ಟಿದ್ದಾರೆ. ಮೋದಿ ಕೊಟ್ಟ ಆ ಸೊನ್ನೆಗೆ ಜನರು ಮರಳಾಗುತ್ತಿದ್ದಾರೆ. ಮೋದಿಯ ಈ ಬಜೆಟ್ ಮಾಧ್ಯಮಗಳಿಗಾದ್ರೂ ತೃಪ್ತಿ ತಂದಿದೆಯಾ ಎಂದು ಮಾಧ್ಯಮಗಳೇ ಜನರಿಗೆ ಸತ್ಯ ಹೇಳಬೇಕು. ಚುನಾವಣೆ ಹಿನ್ನೆಲೆ ಕರ್ನಾಟಕಕ್ಕೆ ಭಾರೀ ಉಡುಗೊರೆ ಕಾದಿದೆ ಎಂದು ಮಾಧ್ಯಮಗಳು ಹೇಳಿದ್ದವು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಬಗ್ಗೆ ನಿನ್ನೆ ಇಡೀ ದಿನ ಮಾಧ್ಯಮಗಳು ಹೊಗಳಿದ್ದವು. ಅದೆಲ್ಲ ಏನಾಯ್ತು ಎಂದು ಜನರು ಯೋಚಿಸಬೇಕಿದೆ.
- ಎಚ್.ಡಿ ಕುಮಾರಸ್ವಾಮಿ
ಕೇಂದ್ರದ ಬಜೆಟ್’ಗೆ ಕರ್ನಾಟಕ ಸರ್ಕಾರ ಕಾರ್ಯಕ್ರಮಗಳೇ ಸ್ಪೂರ್ತಿ:
ಕೇಂದ್ರದ ಬಜೆಟ್’ಗೆ ಕರ್ನಾಟಕ ಸರ್ಕಾರ ಕಾರ್ಯಕ್ರಮಗಳೇ ಸ್ಪೂರ್ತಿ; ಕೃಷಿ ಕ್ಷೇತ್ರ, ಮಾರುಕಟ್ಟೆ, ಸಾಲ ಸೌಲಭ್ಯ ಎಲ್ಲವೂ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು, ಇದರ ಸ್ಪೂರ್ತಿಯಿಂದಾಗಿ ಕೇಂದ್ರ ಬಜೆಟದ ಮಂಡನೆ ಮಾಡಿದೆ. ಬಜೆಟ್ ಕೇವಲ ಘೋಷಣೆ ಆಗಬಾರದು, ಅದು ಅನುಷ್ಠಾನಕ್ಕೆ ಬರಬೇಕು. ನಾಲ್ಕು ವರ್ಷದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ ಪ್ರಧಾನಿ ಮಂತ್ರಿ ಕೃಷಿ ಸಿಂಚನ್ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ ಯೋಜನೆಗೆ ಹಣ ಮಂಜೂರು ಆಗುತ್ತಿಲ್ಲ. ಈ ಯೋಜನೆಯಿಂದ ರೈತರಿಗೆ ಅನುಕೂಲ ಆಗುತಿತ್ತು, ಕೇಂದ್ರದ ಬಜೆಟ್’ನಲ್ಲಿ ಅದು ಮರೆತಿದೆ. ಒಟ್ಟಾರೆ ಜನರ ನಿರೀಕ್ಷೆ ಹುಸಿಯಾಗಿದೆ.
-ಕಾನೂನು ಸಚಿವ ಟಿ.ಬಿ.ಜಯಚಂದ್ರ
ಈ ಬಾರಿ ರೈತರ ಬಗ್ಗೆ ಪಶ್ಚಾತ್ತಾಪ ಪಡುವಂತಹ ಬಜೆಟ್ ಮಾಡಿದ್ದಾರೆ:
ಇದು ಹೇಳಿಕೊಳ್ಳುವಂತಹ ಬಜೆಟ್ ಅಲ್ಲ, ಕಳೆದ ನಾಲ್ಕು ವರ್ಷಗಳ ಕಾಲ ರೈತರಿಗೆ ಅನ್ಯಾಯ ಮಾಡಿದ್ರು, ಈ ಬಾರಿ ರೈತರ ಬಗ್ಗೆ ಪಶ್ಚಾತ್ತಾಪ ಪಡುವಂತಹ ಬಜೆಟ್ ಮಾಡಿದ್ದಾರೆ. ಆರ್ಥಿಕ ಬೆಳವಣಿಗೆ ಸಹಾಯಕವಾಗುವಂತ ಆಯವ್ಯಯ ಇದಲ್ಲಾ, ಉದ್ಯೋಗ ಸೃಷ್ಟಿಸಲು ಅವಕಾಶ ಇಲ್ಲ. ಈ ಆಯವ್ಯಯದಲ್ಲಿ ಬಜೆಟ್’ಅನ್ನು ಅತ್ಯಂತ ಕಳಪೆ ಎಂದು ಹೇಳಲ್ಲ. ಇದೊಂದು ನಿರಾಶಾದಾಯಕ ಬಜೆಟ್.
- ಸಚಿವ ಕೃಷ್ಣಬೈರೇಗೌಡ
ಕೇಂದ್ರ ಬಜೆಟ್ ನಿರಾಶಾದಾಯಕ:
ಕೇಂದ್ರ ಬಜೆಟ್ ನಿರಾಶಾದಾಯಕ. ಆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಸಬ್ ಅರ್ಬನ್ ರೈಲ್ ಯೋಜನೆ ಹಾಗೂ ಮೆಟ್ರೋಗೆ ಕೇಂದ್ರ ಸರ್ಕಾರ ನೀಡಿದ ಅನುದಾನ ಏನಕ್ಕೂ ಸಾಕಾಗಲ್ಲ. ರಾಜ್ಯ ಸರ್ಕಾರವೇ ಹೆಚ್ಚು ಅನುದಾನ ನೀಡಿದೆ.
- ಸಚಿವ ಕೆ.ಜೆ.ಜಾರ್ಜ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.