ಬಜೆಟ್ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ಉತ್ತರ ಹೀಗಿತ್ತು

Published : Feb 01, 2018, 08:44 PM ISTUpdated : Apr 11, 2018, 12:51 PM IST
ಬಜೆಟ್ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ಉತ್ತರ ಹೀಗಿತ್ತು

ಸಾರಾಂಶ

ಯುವಜನತೆ ಅಥವಾ ಕೈಗಾರಿಕಾ ಹಾಗೂ ಉದ್ಯಮ ವಲಯ ಸೇರಿದಂತೆ ಯಾವ ವಲಯಗಳಿಗೂ ನಿರಾಶೆ ತಂದಿದೆ.

ನವದೆಹಲಿ(ಫೆ.01): ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ವ್ಯಂಗ್ಯದ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್'ಡಿಎ ಸರ್ಕಾರದ 2018ನೇ ಸಾಲಿನ ಬಜೆಟ್ ಎಲ್ಲ ರೈತರು, ಯುವಜನತೆ ಅಥವಾ ಕೈಗಾರಿಕಾ ಹಾಗೂ ಉದ್ಯಮ ವಲಯ ಸೇರಿದಂತೆ ಯಾವ ವಲಯಗಳಿಗೂ ನಿರಾಶೆ ತಂದಿದೆ. ರೈತರಿಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿ 4 ವರ್ಷಗಳು ಮುಗಿದಿದೆ, 4 ವರ್ಷಗಳಾದರೂ ಬಜೆಟ್'ನಲ್ಲಿ ಯಾವುದೇ ಆಕರ್ಷಿಸುವ ಯೋಜನೆಗಳಿಲ್ಲ.ಯುವಕರಿಗೆ 4 ವರ್ಷಗಳಾದರೂ ಉದ್ಯೋಗ ದೊರಕಿಲ್ಲ. ಸದ್ಯ ಇನ್ನು ಒಂದು ವರ್ಷ ಮಾತ್ರ ಉಳಿದಿದೆ'ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್ ಕಣ್ಣೀರು ಒರೆಸುವುದನ್ನು ಬಿಟ್ಟರೆ ಮತ್ತೇನಿಲ್ಲ. ಸಮಾಜದ  ರೈತ ಹಾಗೂ ಕೆಳ ವರ್ಗಗಳ ಸಮಾಜಕ್ಕೆ ಬಾಯಿ ಮಾತಿನ ಪಚಾರ ಸೇವೆ ಮಾಡುತ್ತಿದೆ' ಎಂದು ಪ್ರಯೋಜನಕ್ಕೆ ಬಾರದ ಆಯವ್ಯಯ ಎಂದು ಟೀಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!