
ಬೆಂಗಳೂರು, [ಸೆ.23]: ದುನಿಯಾ ವಿಜಯ್ ಪುಂಡಾಟ ಇದೇ ಮೊದಲಲ್ಲ. ಈ ಹಿಂದೆಯು ಹಲವು ಪ್ರಕರಣಗಳಲ್ಲಿ ವಿಜಿ ಹೆಸರು ಕೇಳಿಬಂದಿವೆ.
ಹೀಗೆ ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ದುನಿಯಾ ವಿಜಿ ಹೆಸರು ಕೇಳಿ ಬರುತ್ತಿದೆ. ಈ ಹಿನ್ನೆಯಲ್ಲಿ ವಿಜಿ ಮೇಲೆ ರೌಡಿಶೀಟ್ ಕೇಸ್ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನು ಓದಿ: ನಿಯಾ ವಿಜಿ ವಿರುದ್ಧ ದಾಖಲಾಗಿರೋ ಕೇಸ್ ಗಳಾವುವು? ಇಲ್ಲಿದೆ ಡಿಟೇಲ್ಸ್
ಯಾವ ಕಾರಣಕ್ಕೆ ರೌಡಿಶೀಟ್ ಕೇಸ್?
*ಸಿ ಕೆ ಅಚ್ಚುಕಟ್ಟು ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ.
*ಪತ್ನಿ ನಾಗರತ್ನಗೆ ಬೆದರಿಕೆ ಪ್ರಕರಣ ಕೂಡ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿದೆ.
*ನಿರ್ಮಾಪಕ ಜಯಣ್ಣ ಗೆ ಹಲ್ಲೆ ಮಾಡಿದ ಸಂಬಂಧ ಸಿಸಿಬಿ ವಿಚಾರಣೆ ಮಾಡಿತ್ತು.
*ವೃದ್ದನೊಬ್ಬನ ಮೇಲೆ ಹಲ್ಲೆ ಮಾಡಿ ಸಿಕೆ ಅಚ್ಷುಕಟ್ಟು ಪೊಲೀಸರಿಂದ ಬಂಧನವಾಗಿತ್ತು.
*ನಿವೃತ್ತ ಸೈನಿಕನಿಗೂ ಬೆದರಿಕೆ ಹಾಕಿರು ಕೇಸ್ ಕೂಡಾ ದುನಿಯಾ ವಿಜಿ ಮೇಲಿದೆ.
ಹೀಗೆ ದುನಿಯಾ ವಿಜಿ ಪದೇ ಪದೇ ಅಪರಾಧ ಕೃತ್ಯಗಳಲಿ ಭಾಗಿಯಾಗುತ್ತಿರುವ ಹಿನ್ನಲೆಯಲ್ಲಿ ರೌಡಿಶೀಟ್ ಓಪನ್ ಮಾಡಲು ಪೊಲೀಸರ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.