ಎಫ್‌ಐಆರ್‌ ದಾಖಲಿಗೆ ಪೊಲೀಸ್‌ ಡೈರಿ ನೋಂದಣಿ ಕಡ್ಡಾಯ ಅಲ್ಲ: ಸುಪ್ರೀಂ ಕೋರ್ಟ್‌

First Published May 28, 2018, 11:36 AM IST
Highlights

ಎಫ್‌ಐಆರ್‌ ದಾಖಲಿಸಲು ಅಥವಾ ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಪೊಲೀಸ್‌ ಠಾಣೆಗಳ ಜನರಲ್‌ ಡೈರಿಯಲ್ಲಿ ಅಪರಾಧದ ವಿವರಣೆ ದಾಖಲಾಗಿರುವ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ.

ನವದೆಹಲಿ: ಎಫ್‌ಐಆರ್‌ ದಾಖಲಿಸಲು ಅಥವಾ ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಪೊಲೀಸ್‌ ಠಾಣೆಗಳ ಜನರಲ್‌ ಡೈರಿಯಲ್ಲಿ ಅಪರಾಧದ ವಿವರಣೆ ದಾಖಲಾಗಿರಬೇಕೆಂಬ ಯಾವುದೇ ಷರತ್ತು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕ್ರಿಮಿನಲ್‌ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪಿಗೆ ಸಂಬಂಧಿಸಿ ನ್ಯಾ. ಎನ್‌.ವಿ.ರಮಣ ಮತ್ತು ನ್ಯಾ.ಅಬ್ದುಲ್‌ ನಜೀರ್‌ ನ್ಯಾಯಪೀಠ ಈ ಸ್ಪಷ್ಟನೆ ನೀಡಿದೆ.

ಸ್ಟೇಷನ್‌ ಡೈರಿ ನೋಂದಣಿ ಕಡ್ಡಾಯ ಹೌದು, ಆದರೆ ವಿಚಾರಣೆಗೆ ಅದು ಅತ್ಯಗತ್ಯ ಎಂಬುದು ತಪ್ಪು ಎಂದು ನ್ಯಾಯಪೀಠ ತಿಳಿಸಿದೆ. ಈ ಸಂಬಂಧ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದತ್ತ ಕಾಮತ್‌ ಅವರ ವಾದವನ್ನು ಕೋರ್ಟ್‌ ಎತ್ತಿಹಿಡಿದಿದೆ.

click me!