ಮುಖೇಶ್ ಅಂಬಾನಿಯ ಜಿಯೋ ಸಂಸ್ಥೆ ವಿರುದ್ಧ ಶೀಘ್ರದಲ್ಲೇ ಕ್ರಮ !

By Suvarna Web DeskFirst Published Dec 2, 2016, 3:50 PM IST
Highlights

ಇಲಾಖೆಯ ಮಾಧ್ಯಮ ಘಟಕವಾದ ಡಿಎವಿಪಿ ಸರ್ಕಾರಿ ಜಾಹಿರಾತುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಸಂಸ್ಥೆಯಾಗಿದ್ದು, ಇದು ಕೇವಲ ಸರ್ಕಾರಿ ಜಾಹಿರಾತುಗಳನ್ನು ಮಾತ್ರ ವಿವಿಧ ರೀತಿಯ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತದೆ.

ನವದೆಹಲಿ(ಡಿ.2): ಉಚಿತ ದೂರವಾಣಿ ಕರೆ ಹಾಗೂ ಅಂತರ್ಜಾಲ ಸೇವೆ ಒದಗಿಸುತ್ತಿರುವ ಮುಖೇಶ್ ಅಂಬಾನಿ ನೇತೃತ್ವದ  ರಿಲಯನ್ಸ್ ಜಿಯೋ ಸಂಸ್ಥೆಗೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದು,ಮುದ್ರಣ ಹಾಗೂ ವಿದ್ಯುನ್ಮಾನ ಜಾಹಿರಾತುಗಳಲ್ಲಿ ಪ್ರಧಾನಿಯವರ ಭಾವಚಿತ್ರ ಬಳಸಲು ಪ್ರಧಾನ ಮಂತ್ರಿ ಕಚೇರಿ ಅನುಮತಿ ನೀಡಿಲ್ಲ ಎಂದು ತಿಳಿಸಿದೆ.

ರಾಜ್ಯಸಭೆಯಲ್ಲಿ  ಸಮಾಜವಾದಿ ಪಕ್ಷದ ಸಂಸದ ನೀರಜ್ ಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಾಜ್ಯ ಖಾತೆಯ ಮಾಹಿತಿ ಮತ್ತು ವಾರ್ತಾ ಮಂತ್ರಿ ರಾಜವರ್ಧನ್ ಸಿಂಗ್ ರಾಥೋಡ್, ರಿಲಯನ್ಸನ ಯಾವುದೇ ಜಾಹಿರಾತುಗಳಲ್ಲಿ ಪ್ರಧಾನಿಯವರ ಭಾವಚಿತ್ರ ಬಳಸಲು ನಾವು ಅನುಮತಿ ನೀಡಿಲ್ಲ ಎಂದು ತಿಳಿಸಿದರು.

ಇಲಾಖೆಯ ಮಾಧ್ಯಮ ಘಟಕವಾದ ಡಿಎವಿಪಿ ಸರ್ಕಾರಿ ಜಾಹಿರಾತುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಸಂಸ್ಥೆಯಾಗಿದ್ದು, ಇದು ಕೇವಲ ಸರ್ಕಾರಿ ಜಾಹಿರಾತುಗಳನ್ನು ಮಾತ್ರ ವಿವಿಧ ರೀತಿಯ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತದೆ.ಖಾಸಗಿ ಸಂಸ್ಥೆಗಳಿಗೆ ಯಾವುದೇ ಜಾಹಿರಾತು  ಬಿಡುಗಡೆ ಮಾಡುವುದಿಲ್ಲ' ಎಂದು ತಿಳಿಸಿದರು.

ಸಚಿವರು ಉತ್ತರಿಸಿದ ನಂತರ ಪ್ರತಿಕ್ರಿಯೆ ನೀಡಿದ ಸಂಸದ ನೀರಜ್ ಶೇಖರ್ ' ಹಾಗಾದರೆ ಅನುಮತಿಯಿಲ್ಲದೆ ಜಾಹಿರಾತು ಪ್ರಕಟಿಸಿದ ಜಿಯೋ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು  ಲಾಂಛನಗಳು ಮತ್ತು ಹೆಸರುಗಳ ಕಾಯಿದೆ 1950 ಅನ್ವಯ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಉತ್ತರಿಸಿದರು.

click me!