
ನವದೆಹಲಿ (ಡಿ.02): ಭಾರತೀಯ ಸಾಗರ ಪ್ರದೇಶಗಳಲ್ಲಿ ಸಂಚರಿಸುವ ಚೀನಾ ಹಡಗು ಹಾಗೂ ಸಬ್ ಮೆರಿನ್ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎಂದು ಭಾರತೀಯ ನೌಕಾದಳ ಹೇಳಿದೆ.
ವಾರ್ಷಿಕ ‘ನೌಕಾದಿನ’ ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೌಕಾ ಮುಖ್ಯಸ್ಥ ಸುನೀಲ್ ಲುಂಬಾ, ಭಾರತೀಯ ಸಾಗರ ಪ್ರದೇಶಗಳಲ್ಲಿ ಚೀನಾ ಸಬ್ ಮೆರಿನ್'ಗಳು ಬೀಡು ಬಿಟ್ಟಿದೆ. ಅವುಗಳ ಚಲನವಲನಗಳ ಮೇಲೆ ಕಣ್ಗಾವಲಿಡಲಾಗಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತೀಯ ಸಬ್ ಮೆರಿನ್ ಗಳು ಪಾಕ್ ಸಮುದ್ರಕ್ಕೆ ಪ್ರವೇಶಿಸಲು ಯತ್ನಿಸಿದ್ದವು ಎನ್ನುವ ಆರೋಪವನ್ನು ಪ್ರಸ್ತಾಪಿಸುತ್ತಾ ಪಾಕ್ ಆರೋಪದಲ್ಲಿ ಹುರುಳಿಲ್ಲ. ಭಾರತೀಯ ಸಬ್ ಮೆರಿನ್ ಗಳು ಪಾಕ್
ನಲ್ಲಿ ಬೀಡು ಬಿಟ್ಟಿರಲಿಲ್ಲ. ಇದು ಅಷ್ಟು ಸುಲಭವಲ್ಲ. ಪಾಕ್ ಸುಮ್ಮನೆ ಆರೋಪಿಸುತ್ತಿದೆ’ ಎಂದು ಸುನೀಲ್ ಲುಂಬಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.