ಹಿಮಾಲಯದ ತಪ್ಪಲಲ್ಲಿ ಮೋದಿ ಧ್ಯಾನ: ಟ್ರೋಲ್‌ಗೆ ಛಾಟಿ ಬೀಸಿದಂತಿದೆ ಈ ಫೋಟೋ

Published : May 20, 2019, 03:26 PM ISTUpdated : May 20, 2019, 03:30 PM IST
ಹಿಮಾಲಯದ ತಪ್ಪಲಲ್ಲಿ ಮೋದಿ ಧ್ಯಾನ: ಟ್ರೋಲ್‌ಗೆ ಛಾಟಿ ಬೀಸಿದಂತಿದೆ ಈ ಫೋಟೋ

ಸಾರಾಂಶ

ಎಲ್ಲಾ ಸೌರ್ಯಗಳಿದ್ದ ಗುಹೆಯಲ್ಲಿ ಮೋದಿ ಧ್ಯಾನ: ಪ್ರತಿಪಕ್ಷಗಳ ಟೀಕೆ| ಗುಹೆಯೊಳಗಿನ ಫೋಟೋ ಟ್ರೋಲ್ ಆದ ಬೆನ್ನಲ್ಲೇ ಮತ್ತೊಂದು ಫೋಟೋ ಟ್ವೀಟ್ ಮಾಡಿದ ಮೋದಿ| ಟ್ರೋಲ್ ಮಾಡುತ್ತಿದ್ದವರ ಬಾಯಿಗೆ ಬೀಗ ಜಡಿದಂತಿದೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ ಈ ಫೋಟೋ|

ನವದೆಹಲಿ[ಮೇ 20] : ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ಕೇದಾರನಾಥ ಯಾತ್ರೆಯಲ್ಲಿದ್ದಾರೆ. ಕೇದಾರನಾಥದಲ್ಲಿರುವ ಮೋದಿ ಫೋಟೋಗಳು ಸದ್ಯ ಸಾಮಾಝಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗಲೇ ಮೋದಿ ಯಾತ್ರೆ ಕುರಿತಾಗಿ ಪರ ವಿರೋಧಗಳೂ ವ್ಯಕ್ತವಾಗಿದೆ. ಅದರಲ್ಲೂ ವಿಶೇಷವಾಗಿ ಮೋದಿ ಧ್ಯಾನಕ್ಕೆಂದು ಕುಳಿತಿದ್ದ ಗುಹೆಯಲ್ಲಿ ಹ್ಯಾಂಗರ್, ಬೆಡ್ ಇದೆ ಎಂಬ ವಿಚಾರ ಭಾರೀ ಸದ್ದು ಮಾಡಿತ್ತು ಹಾಗೂ ಮೋದಿ ಕೇವಲ ತೋರಿಕೆಯ ಧ್ಯಾನ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿತ್ತು. ಆದರೀಗ ಖುದ್ದು ಮೋದಿ ಟ್ವೀಟ್ ಮಾಡಿರುವ ಫೋಟೋ ಒಂದು ಟೀಕಿಸಿದವರಿಗೆ ಎದುರೇಟು ನೀಡಿದಂತಿದೆ.

ಫಲಿತಾಂಶವೆಲ್ಲಾ ಶೂನ್ಯ: ಕೇದಾರನಾಥ್ ಸನ್ನಿಧಿಯಲ್ಲಿ ಮೋದಿ ಧ್ಯಾನ!

ಹೌದು ಮೋದಿ ಕೇದರನಾಥದ ಗುಹೆಯಲ್ಲಿ ಎಲ್ಲಾ ರೀತಿಯ ತಯಾರಿ ನಡೆಸಿ ಧ್ಯಾನಕ್ಕೆ ಕುಳಿತಿದ್ದಾರೆ ಎಂದು ಅರೋಪಿಸಿದವರಿಗೆಲ್ಲಾ ತಕ್ಕ ಉತ್ತರ ನೀಡಿದಂತಿದೆ ಮೋದಿ ಟ್ವೀಟ್ ಮಾಡಿರುವ ಫೋಟೋ. ಈ ಚಿತ್ರದಲ್ಲಿ ಮೋದಿ ಎಲ್ಲಾ ಸೌರ್ಯಗಳಿರುವ ಯಾವುದೋ ಗುಹೆಯಲ್ಲಿಲ್ಲ. ಬದಲಾಗಿ ಹಿಮಾಲಯ ತಪ್ಪಲಲ್ಲಿ, ಹಿಮದಿಂದಾವೃತ ಪ್ರದೇಶದಲ್ಲಿ ಕುಳಿತಿರುವ ಮೋದಿ, ಕೊರೆಯುವ ಚಳಿ ನಡುವೆಯೂ ಕೇಸರಿ ಶಾಲನ್ನು ಹೊದ್ದು ಅತ್ಯಂತ ತನ್ಮಯತೆಯಿಂದ ಧ್ಯಾನ ಮಾಡುತ್ತಿರುವ ಚಿತ್ರವದು. 

ಈ ಕುರಿತಾಗಿ ಬರೆದುಕೊಂಡಿರುವ ಪ್ರಧಾನಿ ಮೋದಿ 'ಅಮೋಘ, ವೈಭವೋಪೇತ. ಪ್ರಶಾಂತತೆ ಹಾಗೂ ಆಧ್ಯಾತ್ಮಿಕತೆಯ ಆಗರ. ಈ ಹಿಮಾಲಯದಲ್ಲಿ ಅದೇನೋ ವಿಶೇಷತೆ ಇದೆ. ಹಿಮಾಲಯದ ಬೆಟ್ಟಕ್ಕೆ ಮರಳುವುದರಲ್ಲಿ ಏನೋ ವಿಶಿಷ್ಟ ಬಗೆಯ ಆನಂದವಿದೆ' ಎಂದಿದ್ದಾರೆ.

ಮೋದಿ ಧ್ಯಾನ ಮಾಡಿದ ಗುಹೆಯಲ್ಲಿ ಆಧುನಿಕ ಸೌಲಭ್ಯಗಳು!

ಈಗಾಗಲೇ ಗುಹೆಯಲ್ಲಿರುವ ಫೋಟೋ ಪ್ರತಿಪಕ್ಷಗಳು ಟ್ರೋಲ್ ಮಾಡಿದ್ದು, ಈ ಟ್ವೀಟ್ ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಕಾದು ನೊಡಬೇಕು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು