
ರಾಂಚಿ[ಜೂ. 20] ಈಗಾಗಲೇ ರಾಂಚಿ ತಲುಪಿರುವ ಪ್ರಧಾನಿ ನರೇಂದ್ರ ಮೋದು ಜೂನ್ 21 ರಂದು ಬೆಳಗ್ಗೆ 6 ಗಂಟೆಗೆ ಯೋಗ ಮಾಡಲಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿ ಶುಕ್ರವಾರ ಸುಮಾರು 40 ಸಾವಿರ ಜನರ ಜತೆ ಯೋಗ ಮಾಡಲಿದ್ದಾರೆ.
ಈ ಸಲದ ಯೋಗ ದಿನಾಚರಣೆ ನಡೆಯಲಿರುವ ಪ್ರಭಾತ್ ಮೈದಾನಕ್ಕೆ ನಸುಕಿನ 3 ಗಂಟೆಯಿಂದಲೇ ಯೋಗಾಸಕ್ತರಿಗೆಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು, ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್, ರಾಜ್ಯ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಇರಲಿದ್ದಾರೆ.
ಯೋಗಕ್ಕೆ ಮೋದಿ ವಿಶ್ವಮಾನ್ಯತೆ ಕೊಡಿಸಿದ್ದು ಹೇಗೆ?
ಯೋಗ ದಿನಕ್ಕೆ ಈ ಬಾರಿ 'ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್' ಎಂಬ ಘೋಷವಾಕ್ಯ ಸಿದ್ಧಪಡಿಸಲಾಗಿದೆ. ಟ್ವೀಟ್ ಮಾಡಿರುವ ಮೋದಿ ಯೋಗವನ್ನು ನಿಮ್ಮ ಜೀವನದ ಅವಿಭಾಜ್ಯ ಸಂಪತ್ತನ್ನಾಗಿ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.