ಆರೋಗ್ಯ ಕ್ಷೇತ್ರಕ್ಕೆ ಮೋದಿ ಹೊಸ ಪ್ಲಾನ್, ಕಾರ್ಮಿಕನಿಗೆ ವರವಾದ ಲಾಕ್‌ಡೌನ್: ಫೆ.23ರ ಟಾಪ್ 10 ಸುದ್ದಿ!

Published : Feb 23, 2021, 04:47 PM IST
ಆರೋಗ್ಯ ಕ್ಷೇತ್ರಕ್ಕೆ ಮೋದಿ ಹೊಸ ಪ್ಲಾನ್, ಕಾರ್ಮಿಕನಿಗೆ ವರವಾದ ಲಾಕ್‌ಡೌನ್: ಫೆ.23ರ ಟಾಪ್ 10 ಸುದ್ದಿ!

ಸಾರಾಂಶ

ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆ ಕುರಿತು ಮೋದಿ ಹೊಸ ಪ್ಲಾನ್ ಮಾಡಿದ್ದಾರೆ. ಬಿಜೆಪಿ ವಿರುದ್ಧವೇ ತಿರುಗಿ ಬೀಳುತ್ತಿರುವ ನಾಯಕ ಯತ್ನಾಳ್‌ಗೆ ವಾರ್ನಿಂಗ್ ನೀಡಲಾಗಿದೆ. ಹಿರೇನಾಗವಲ್ಲಿ ಕ್ರಷರ್‌ ದುರಂತದಲ್ಲಿ ಮೃತರ ಕುಟುಂಬಕ್ಕೆ ಪಿಎಂ ಮೋದಿ ಸಾಂತ್ವನ ಹೇಳಿದ್ದಾರೆ. ಮಳೆಯಾಳಿ ಕುಟ್ಟಿಯಾದ ಸನ್ನಿ, ಭಾರತ ಸಂಭಾವ್ಯ ತಂಡ ಪ್ರಕಟ ಸೇರಿದಂತೆ ಫೆಬ್ರವರಿ 23ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಕೊರೋನಾ ಮಹಾಮಾರಿ ಎದುರಿಸಿದ ಭಾರತ: ಹೀಗಿದೆ ನೋಡಿ ಮೋದಿ ಮುಂದಿನ ಪ್ಲಾನ್!...

ಪಿಎಂ ಮೋದಿ ಮಂಗಳವಾರದಂದು ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತಾಗಿ ಆಯೋಜಿಸಲಾಗಿದ್ದ ವೆಬಿನಾರ್‌ ಒಂದರಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅನುದಾನ ಅಭೂತಪೂರ್ಣವಾಗಿದೆ. 

ಅಯೋಧ್ಯೆ ಉತ್ಖನನ ಮಾಡಿದ ಕೆ.ಕೆ.ಮೊಹಮ್ಮದ್‌ಗೆ ಪಾದೂರು ರಾಷ್ಟ್ರೀಯ ಪ್ರಶಸ್ತಿ...

ಅಯೋಧ್ಯೆಯ ಬಾಬ್ರಿ ಮಸೀದಿ ಉತ್ಖನನ ಮಾಡಿ ಅಲ್ಲಿ ರಾಮಮಂದಿರ ಇದ್ದುದನ್ನು ದೃಢಪಡಿಸಿದ್ದ ಪುರಾತತ್ವ ಸಂಶೋಧಕ ಮೊಹಮ್ಮದ್‌ ಅವರಿಗೆ ಪಾದೂರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಬಿಜೆಪಿ ಮುಖಂಡ ಯತ್ನಾಳ್‌ಗೆ ಬಂತು ವಾರ್ನಿಂಗ್...

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಎಚ್ಚರಿಸಲಾಗಿದೆ. 

ಇಂಗ್ಲೆಂಡ್ ವಿರುದ್ದದ ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ ಪ್ರಕಟ...

ಭಾರತ-ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 24ರಂದು ಅಹಮದಾಬಾದ್‌ನ ಮೊಟೇರಾ ಸ್ಟೇಡಿಯಂನಲ್ಲಿ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯ ನಡೆಯಲಿದೆ. 

ಹಿರೇನಾಗವಲ್ಲಿ ಕ್ರಷರ್‌ ದುರಂತ: ಮೃತರ ಕುಟುಂಬಕ್ಕೆ ಪಿಎಂ ಮೋದಿ ಸಾಂತ್ವನ...

ಚಿಕ್ಕಬಳ್ಳಾಪುರ  ಹಿರೇನಾಗವಲ್ಲಿ ಕ್ರಷರ್‌ನಲ್ಲಿ ಜಿಲೆಟಿನ್ ಸ್ಪೋಟಗೊಂಡು 6 ಮಂದಿ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರಿಗೆ ಮೋದಿ ಸಂತಾಪ ಸೂಚಿಸಿದ್ದಾರೆ. 

ಅಪ್ಪಟ ಮಲಯಾಳಿ ಕುಟ್ಟಿಯಾಗಿ ಸನ್ನಿ: ಆದ್ರೆ ಬಾಳೆಲೆಯಲ್ಲಿ ಉಣ್ಣೋದು ಗೊತ್ತಾಗಲಿಲ್ಲ...

ಬಾಲಿವುಡ್ ನಟಿ ಸನ್ನಿ ಲಿಯೋನ್ ಫ್ಯಾಮಿಲಿ ಜೊತೆ ಕೇರಳದಲ್ಲಿ ಎಂಜಾಯ್ ಮಾಡಿದ್ದಾರೆ. ಸನ್ನಿಗೆ ಎಲ್ಲಾ ಸೆಟ್ಟ ಆದ್ರೂ ಕೇರಳ ಸ್ಟೈಲ್‌ನಲ್ಲಿ ಬಾಳೆಲೆಯಲ್ಲಿ ಉಣ್ಣೋಕೆ ಮಾತ್ರ ಗೊತ್ತಾಗಿಲ್ಲ.

ಮಿನಿಸ್ಟರ್ ಕಾರ್ ಓವರ್ ಟೇಕ್ ಮಾಡಿದ ಪ್ರವಾಸಿಗರನ್ನು ಠಾಣೆಯಲ್ಲಿ ಕೂಡಿಟ್ಟ ಪೂಲೀಸ್!...

ರಾಜಕೀಯ ನಾಯಕರು ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಯಾವುದೇ ಕ್ರಮ ಇಲ್ಲ. ಆದರೆ ಜನಸಾಮಾನ್ಯರು ಯಾವುದೇ ತಪ್ಪು ಮಾಡದಿದ್ದರೂ ಅವರ ಮೇಲೆ ಕ್ರಮ ಕೈಗೊಂಡ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸಚಿವರ ಕಾರನ್ನು ಓವರ್ ಟೇಕ್ ಮಾಡಿದ ಕಾರಣಕ್ಕೆ ಪ್ರವಾಸಿಗರನ್ನು ಪೊಲೀಸ್ ಠಾಣೆಯಲ್ಲಿ ಕೂಡಿಟ್ಟ ಘಟನೆ ನಡೆದಿದೆ.

ಲಾಕ್‌ಡೌನ್ ವೇಳೆ ಊರಿಗೆ ಮರಳಿದ್ದ ಕಾರ್ಮಿಕನಿಗೆ ಒಲಿದ ಅದೃಷ್ಟ, ಕ್ಷಣಾರ್ಧದಲ್ಲಿ ಲಕ್ಷಾಧಿಪತಿ!...

ಲಾಕ್‌ಡೌನ್ ವೇಳೆ ಮನಗೆ ಮರಳಿದ ಕಾರ್ಮಿಕ ಭಗವಾನ್ ದಾಸ್ ಅದೃಷ್ಟವೇ ಬದಲಾಗಿದೆ. ಆತನಿಗೆ ಅಗೆಯುವ ವೇಳೆ ಎರಡುಉ ವಜ್ರಗಳು ಸಿಕ್ಕಿವೆ. ಇದನ್ನು ಕಂಡು ಭಗವಾನ್ ಹಾಗೂ ಆತನ ಗೆಳೆಯರು ಬಹಳ ಖುಷಿಪಟ್ಟಿದ್ದಾರೆ. 

ಚಿಕ್ಕಬಳ್ಳಾಪುರ ಜಿಲೆಟಿನ್​ ಸ್ಫೋಟ ಪ್ರಕರಣ: ಗಂಭೀರ ಕಾರಣ ಕೊಟ್ಟ ಸಿದ್ದರಾಮಯ್ಯ...

ಚಿಕ್ಕಬಳ್ಳಾಪುರ ಕಲ್ಲು ಕ್ವಾರಿಯಲ್ಲಿ ಆರು ಮಂದಿ ಸಾವಿಗೀಡಾಗಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ ಕೊಟ್ಟಿದ್ದಾರೆ.

ಹಾಸನ : ಮೇಲೆರಗಿದ ಚಿರತೆಯನ್ನು ಬರಿಗೈಯಲ್ಲಿ ಹೋರಾಡಿ ಕೊಂದ ವ್ಯಕ್ತಿ...

ಬೈಕಿನಲ್ಲಿ ಬರುತ್ತಿದ್ದ ವೇಳೆ  ತಮ್ಮ ಮೇಲೆ ಎರಗಿದ ಚಿರತೆಯನ್ನೇ ವ್ಯಕ್ತಿಯೋರ್ವ ಹತ್ಯೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಬರಿಗೈನಲ್ಲಿ ಚಿರತೆ  ಹತ್ಯೆ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ