ಕಾಶ್ಮೀರ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವಮಾನಿಸಲಾಗಿದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಡಿಸಿದೆ. 2 ತಿಂಗಳ ಬಳಿಕಕ ಡೀಸೆಲ್ ಬೆಲೆ ಏರಿಕೆಯಾಗಿದೆ. ಪಂದ್ಯ ಸೋತರೂ ಗೆದ್ದರೂ ಬೆಂಬಲ ಆರ್‌ಸಿಬಿಗೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. HDK ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದು, ಪತಿ ಬರಮಾಡಿಕೊಂಡ ಪತ್ನಿ ಶಿಲ್ಪಾ ಶೆಟ್ಟಿ ಸೇರಿದಂತೆ ಸೆ.25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕಾಶ್ಮೀರ ಚರ್ಚೆ ವೇಳೆ ಮೋದಿ ಅವಹೇಳನ: ಬ್ರಿಟನ್ ವಿರುದ್ಧ ಭಾರತ ಗರಂ
undefined
ಕಾಶ್ಮೀರದಲ್ಲಿ (kashmir) ಮಾನವ ಹಕ್ಕು’ಗಳ ವಿಚಾರಕ್ಕೆ ಸಂಬಂಧಿಸಿ ಬ್ರಿಟನ್ (Britain) ಸಂಸತ್ತಿನಲ್ಲಿ (parliament) ನಡೆದ ಸರ್ವಪಕ್ಷಗಳ ಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಕೆಲ ಸಂಸದರು ಬಳಸಿದ ಪದಗಳ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ
2 ತಿಂಗಳ ನಂತರ ಡೀಸೆಲ್ ಬೆಲೆ ಏರಿಕೆ : ಪೆಟ್ರೋಲ್ ಬೆಲೆ ಏರಿಕೆ ಇಲ್ಲ
ಕಳೆದ 2 ತಿಂಗಳುಗಳಿಂದ ತಟಸ್ಥವಾಗಿದ್ದ ಡೀಸೆಲ್ (Diesel) ಬೆಲೆಯಲ್ಲಿ ಶುಕ್ರವಾರ ಲೀಟರ್‌ಗೆ 20 ಪೈಸೆ ಏರಿಕೆಯಾಗಿದೆ ಹಾಗೂ ಪೆಟ್ರೋಲ್ (Petrol)ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಮೂಲಕ ದೆಹಲಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 88.82 ರು. ಹಾಗೂ ಬೆಂಗಳೂರಿನಲ್ಲಿ 94.27 ರು. ಆಗಿದೆ.
IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!
ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings)ಗೆ ಶರಣಾಗಿದೆ. ಸಾಕಷ್ಟು ಪೈಪೋಟಿ ನಿರೀಕ್ಷೆ ಮಾಡಲಾಗಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್‌ಸಿಬಿ ಸೋಲಿನ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್(Kichcha Sudeepa) ಬೆಂಗಳೂರು ತಂಡದ ಕುರಿತಂತೆ ಮುತ್ತಿನಂತ ಮಾತನಾಡಿದ್ದಾರೆ.
ಮಮ್ಮುಟ್ಟಿ ಮಗ ದುಲ್ಖರ್‌ಗೆ ರಶ್ಮಿಕಾ ಜೋಡಿ
ಮೃಣಾಲ್ ಠಾಕೂರ್ ಮತ್ತು ಮಾಲಿವುಡ್ ನಟ ಮಮ್ಮುಟ್ಟಿ ಅವರ ಪುತ್ರ ದುಲ್ಕರ್ ಸಲ್ಮಾನ್(Dulquer Salmaan) ಕೆಲವು ತಿಂಗಳ ಹಿಂದೆ ಹನು ರಾಘವಪುಡಿಯವರ ಹೊಸ ರೊಮ್ಯಾಂಟಿಕ್ ಸಿನಿಮಾ ಚಿತ್ರೀಕರಣವನ್ನು ಆರಂಭಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ
ಜಾತಿ ಸಮೀಕ್ಷೆ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
IPL 2021 DC vs RR: ಟಾಸ್ ಗೆದ್ದ ರಾಯಲ್ಸ್ ಬೌಲಿಂಗ್ ಆಯ್ಕೆ; ಉಭಯ ತಂಡದಲ್ಲಿ ಮಹತ್ವದ ಬದಲಾವಣೆ
14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಹಾಗೂ ರಾಜಸ್ಥಾನ ರಾಯಲ್ಸ್(Rajasthan Royals) ನಡುವಿನ 36ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಹಲೋ ಮಿನಿಸ್ಟರ್: ಸಾರ್ವಜನಿಕರ ದೂರುಗಳಿಗೆ ಆರಗ ಜ್ಞಾನೇಂದ್ರ ನೇರ ಉತ್ತರ
ಮಾಧ್ಯಮ ಲೋಕದಲ್ಲೇ ವಿನೂತನ ಕಾರ್ಯಕ್ರಮ ಎನಿಸಿಕೊಂಡಿರುವ 'ಹಲೋ ಮಿನಿಸ್ಟರ್' ಕಾರ್ಯಕ್ರಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಿದ್ದರು. ಮೊದಲನೆಯದಾಗಿ ಜ್ಞಾನೇಂದ್ರ ಅವರು ಬೆಳೆದು ಬಂದ ಹಾದಿ, ರಾಜಕೀಯ, ವೈಯಕ್ತಿಕ ಬದುಕಿನ ಪರಿಚಯ ಮಾಡಿಕೊಡಲಾಯಿತು.
ಜೈಲಿನಿಂದ ಮರಳಿದ ಪತಿ, ಆತ್ಮೀಯವಾಗಿ ಬರ ಮಾಡಿಕೊಂಡ ಶಿಲ್ಪಾ ಶೆಟ್ಟಿ!
ಅಶ್ಲೀಲ ವಿಡಿಯೋ (Porn Video) ಚಿತ್ರೀಕರಣದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ (Raj Kundra) ಪೊಲೀಸರ ವಶದಲ್ಲಿದ್ದರು. ಜಾಮೀನು (Bail) ಪಡೆದುಕೊಂಡು ಹೊರ ಬಂದಿದ್ದಾರೆ. ಪತಿಯನ್ನು ಕಂಡು ಶಿಲ್ಪಾ ಭಾವುಕರಾಗಿದ್ದಾರೆ. ಪತಿಯನ್ನು ಬರ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.