
ಅಹಮದಾಬಾದ್(ಡಿ.14): ಗುಜರಾತಿನ ಎರಡನೇ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಜಿಲ್ಲೆಯ ಸಾಬರಮತಿ ವಿಧಾನಸಭಾ ಕ್ಷೇತ್ರದ ಶಾಲೆಯೊಂದರಲ್ಲಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಮಾಡಿದ್ದಾರೆ.
ಮತಹಾಕಿದ ಬಳಿಕ ಅವರ ಹಿರಿಯಣ್ಣ ಸೋಮಬಾಯಿ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿ ಯೋಗಕ್ಷೇಮ ವಿಚಾರಿಸಿದರು. ಇಂದು ಮುಂಜಾನೆಯೇ ಗಾಂಧಿನಗರದಲ್ಲಿ ನರೇಂದ್ರ ಮೋದಿ ತಾಯಿ ಹೀರಾಬೆನ್(95 ವರ್ಷ) ಮತ ಚಲಾಯಿಸಿದರು.
ನಿಶಾನ್ ಹೈಸ್ಕೂಲ್'ನಲ್ಲಿ ಮತದಾನ ಮಾಡಿದ ಬಳಿಕ ಮೋದಿ, ಮತಗಟ್ಟೆಯ ಹೊರಗಡೆ ನೆರೆದಿದ್ದ ಸಾವಿರಾರು ಜನರಿಗೆ ಶಾಯಿಯ ಗುರುತು ಹಾಕಿದ ಬೆರಳನ್ನು ತೋರಿಸುತ್ತಾ ರೋಡ್ ಶೋ ನಡೆಸಿದರು. ಪ್ರಧಾನಿ ರೋಡ್ ಶೋ ನಡೆಸಿದ್ದನ್ನು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.