ಜಪಾನ್ ಪ್ರಧಾನಿ ನಿವಾಸಕ್ಕೆ ಮೋದಿ ಭೇಟಿ

By Web DeskFirst Published Oct 29, 2018, 7:27 AM IST
Highlights

ಭಾರತ- ಜಪಾನ್ ನಡುವಣ 13 ನೇ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ಜಪಾನ್ ಪ್ರಧಾನಿ ಶಿನ್ಜೋ ಅಬೆ ಅತ್ಯಂತ ಆತ್ಮೀಯ ಆತಿಥ್ಯ ನೀಡಿದ್ದಾರೆ.

ಯಮನಾಷಿ: ಭಾರತ- ಜಪಾನ್ ನಡುವಣ 13 ನೇ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ಜಪಾನ್ ಪ್ರಧಾನಿ ಶಿನ್ಜೋ ಅಬೆ ಅತ್ಯಂತ ಆತ್ಮೀಯ ಆತಿಥ್ಯ ನೀಡಿದ್ದಾರೆ. ಶೃಂಗಸಭೆಯ ಮೊದಲ ದಿನವಾದ ಭಾನುವಾರ ಉಭಯ ನಾಯಕರು ಅನೌಪಚಾರಿಕ ಸಭೆ ನಡೆಸಿದರು. 

ತದನಂತರದಲ್ಲಿ ಜಪಾನ್ ರಾಜಧಾನಿ ಟೋಕಿಯೋದಿಂದ 110 ಕಿ.ಮೀ. ದೂರದಲ್ಲಿರುವ ಯಮನಾಶಿ ಪ್ರಾಂತ್ಯದಲ್ಲಿನ ತಮ್ಮ ರಜಾಕಾಲದ ನಿವಾಸದಲ್ಲಿ ಮೋದಿ ಅವರಿಗಾಗಿ ರಾತ್ರಿ ವಿಶೇಷ ಭೋಜನ ಏರ್ಪಡಿಸಿದ್ದರು. ವಿದೇಶಿ ಗಣ್ಯರೊಬ್ಬರಿಗೆ ಜಪಾನ್ ಪ್ರಧಾನಿ ಅಬೆ, ಹೀಗೆ ಮನೆಗೆ ಕರೆದು ಆತಿಥ್ಯ ನೀಡಿದ್ದು ಇದೇ ಮೊದಲು ಎಂಬುದೇ ವಿಶೇಷ.

click me!