
ಅಹಮದಾಬಾದ್: ಗುಜರಾತ್ ಚುನಾವಣಾ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಾಬರಮತಿ ನದಿಯಲ್ಲಿ ಸೀಪ್ಲೇನ್ ಮೂಲಕ ಸಂಚರಿಸಿ ಮತದಾರರನ್ನು ಸೆಳೆಯಲು ಯತ್ನಿಸಿದರು.
ಮೋದಿ ಅವರ ಸೀಪ್ಲೇನ್ ಸಂಚಾರ ಶ್ರೀಮಂತಿಕೆಯ ಸಂಕೇತ. ಇದು ಬಡವರು-ಸಿರಿವಂತರ ನಡುವಿನ ಅಂತರದ ಪ್ರದರ್ಶನ. ಇದು ಹವಾ-ಹವಾಯಿ.
ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ
ಅವರು ಸಾಬರಮತಿಯಿಂದ ಸೀಪ್ಲೇನ್’ನಲ್ಲಿ ಸಂಚರಿಸಿ ಅಂಬಾಜಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಿಜೆಪಿ ಮಂಗಳವಾರ ಅಹ್ಮದಾಬಾದ್‌ನಲ್ಲಿ ಮೋದಿ ರೋಡ್‌ಶೋ ಏರ್ಪಡಿಸಿತ್ತು. ಆದರೆ ಭದ್ರತಾ ಕಾರಣಗಳಿಗಾಗಿ ರೋಡ್ ಶೋಗೆ ಪೊಲೀಸರು ಅನುಮತಿ ರದ್ದುಗೊಳಿಸಿದ್ದರು.
ಹೀಗಾಗಿ ಕೊನೇ ಕ್ಷಣದಲ್ಲಿ ಮೋದಿ ಅವರು ಸೀ ಪ್ಲೇನ್‌ನಲ್ಲಿ ಸಂಚರಿಸಿ ಹವಾ ಸೃಷ್ಟಿಸಲು ನಿರ್ಧರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.