ವಾರಣಾಸಿ-ಕೊಲಂಬೋ ನಡುವೆ ವಿಮಾನಯಾನ ಆರಂಭ

Published : Aug 04, 2017, 04:03 PM ISTUpdated : Apr 11, 2018, 01:11 PM IST
ವಾರಣಾಸಿ-ಕೊಲಂಬೋ ನಡುವೆ ವಿಮಾನಯಾನ ಆರಂಭ

ಸಾರಾಂಶ

ಶ್ರೀಲಂಕಾ ತಮಿಳರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಇಂದು ಈಡೇರಿದೆ. ಭರವಸೆ ನೀಡಿದಂತೆ ಐತಿಹಾಸಿಕ ತಾಣಗಳಾದ ವಾರಣಾಸಿ ಮತ್ತು ಶ್ರೀಲಂಕಾ ರಾಜಧಾನಿ ಕೊಲಂಬೋ ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ.

ವಾರಣಾಸಿ (ಆ.04): ಶ್ರೀಲಂಕಾ ತಮಿಳರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಇಂದು ಈಡೇರಿದೆ. ಭರವಸೆ ನೀಡಿದಂತೆ ಐತಿಹಾಸಿಕ ತಾಣಗಳಾದ ವಾರಣಾಸಿ ಮತ್ತು ಶ್ರೀಲಂಕಾ ರಾಜಧಾನಿ ಕೊಲಂಬೋ ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೇ ನಲ್ಲಿ ಶ್ರೀಲಂಕಾಗೆ ಎರಡು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ತಮಿಳರು ಹಾಗೂ ಇಲ್ಲಿನವರ ನಡುವಿನ ಸಂಬಂಧ, ಸಂಪರ್ಕ ವೃದ್ದಿಗಾಗಿ ಕೊಲಂಬೋ ಮತ್ತು ವಾರಣಾಸಿ ನಡುವೆ ಆಗಸ್ಟ್ ಒಳಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಇಂದು ಅದಕ್ಕೆ ಚಾಲನೆ ಸಿಕ್ಕಿದೆ. ಏರ್ ಇಂಡಿಯಾ ಸಿಎಂಡಿ ಅಶ್ವಾನಿ ಲೋಹಾನಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ವಾರಣಾಸಿ-ಶ್ರೀಲಂಕಾ ಮಾರ್ಗದಲ್ಲಿ ನೂತನ ಏರ್ ಬಸ್ 320 ಯನ್ನು ನಿಯೋಜಿಸಲಾಗಿದೆ. ಎರಡು ವಾರಕ್ಕೊಮ್ಮೆ ವಿಮಾನಯಾನ ಸೇವೆ ಇರುತ್ತದೆ. ಶುಕ್ರವಾರ ಹಾಗೂ ಭಾನುವಾರ ವಿಮಾನ ಹಾರಾಟವಿರುತ್ತದೆ. ಏರ್ ಬಸ್ 320ಯಲ್ಲಿ ಒಟ್ಟು 180 ಆಸನಗಳಿದ್ದು, ಎಲ್ಲಾ ಆಸನಗಳು ಎಕನಾಮಿಕ್ ಕ್ಲಾಸ್’ನವೇ ಆಗಿವೆ.  ಟಿಕೆಟ್ ದರ 15,000 ರೂಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಪಡೆದ ಬಾಂಗ್ಲಾದೇಶಕ್ಕೆ ಆಗುವ ನಷ್ಟವೆಷ್ಟು? ಭಾರತ ಕಳೆದುಕೊಳ್ಳೋದೇಷ್ಟು?
ಸರ್ಪದೋಷ ಪರಿಹಾರಕ್ಕೆ 'ಹಾವಿನಂತೆ ಹುಟ್ಟಿದ್ದ' 7 ತಿಂಗಳ ಮಗಳನ್ನು ಕೊಂದಿದ್ದ ಅಮ್ಮ, ಮರಣದಂಡನೆ ಶಿಕ್ಷೆ ರದ್ದು ಮಾಡಿದ ಕೋರ್ಟ್‌!