
ಪಟಿಯಾಲ, ಪಂಜಾಬ್: 12ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಾಲೆಯ ಪ್ರಾಂಶುಪಾಲೆಯನ್ನು ಅಮಾನತು ಮಾಡಿರುವ ಘಟನೆ ಪಂಜಾಬ್’ನಲ್ಲಿ ನಡೆದಿದೆ.
ಮರ್ದಾನ್’ಪುರದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಪ್ರಾಂಶುಪಾಲೆ ಆದರ್ಶ್ ಭಲ್ಲಾರನನು ಅಮಾನತುಗೊಳಿಸಲಾಗಿದೆಯೆಂದು ಪಂಜಾಬ್ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕೃಷ್ಣನ್ ಕುಮಾರ್ ತಿಳಿಸಿದ್ದಾರೆ.
ಪಟಿಯಾಲದಲ್ಲಿರುವ ತನ್ನ ಮನೆಗೆ ತನ್ನನ್ನು ಕರೆದೊಯ್ಯುತ್ತಿದ್ದಳು, ಪ್ರಾಂಶುಪಾಲೆ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ದೈಹಿಕ ಸಂಬಂಧ ಹೊಂದಲು ಸತಾಯಿಸುತ್ತಿದ್ದಾರೆ ಎಂದು 12ನೇ ತರಗತಿ ವಿದ್ಯಾರ್ಥಿಯೊಬ್ಬನು ದೂರು ನೀಡಿದ್ದನು.
ಆದರೆ ವಿದ್ಯಾರ್ಥಿಯು ಆಕೆಯ ಬೇಡಿಕೆಗಳನ್ನು ಒಪ್ಪದಿದ್ದಾಗ ಆತನ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಯ ದೂರಿನ ಮೇರೆಗೆ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಪ್ರಾಂಶುಪಾಲೆ ತಪ್ಪತಸ್ಥಳೆಂದು ಸಾಬೀತಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷವೂ ಈ ಪ್ರಾಂಶುಪಾಲೆಯ ವಿರುದ್ಧ ಓರ್ವ ವಿದ್ಯಾರ್ಥಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಆದರೆ ರಾಜಕೀಯ ಒತ್ತಡಗಳಿಂದಾಗಿ ಆಕೆಯ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಹಿಂದಿ ರೋಮ್ಯಾಂಟಿಕ್ ಹಾಡೊಂದಕ್ಕೆ ಈ ಪ್ರಾಂಶುಪಾಲೆ ವಿದ್ಯಾರ್ಥಿಯ ಜೊತೆ ಡ್ಯಾನ್ಸ್ ಮಾಡುವ ವಿಡಿಯೋ ಕೂಡಾ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.