ಇಂದು ರಾತ್ರಿ ಡಿಸ್ಕವರಿಯಲ್ಲಿ ಪಿಎಂ ಮೋದಿ 'ಅರಣ್ಯ ಸಾಹಸ'!

Published : Aug 12, 2019, 08:18 AM IST
ಇಂದು ರಾತ್ರಿ ಡಿಸ್ಕವರಿಯಲ್ಲಿ ಪಿಎಂ ಮೋದಿ 'ಅರಣ್ಯ ಸಾಹಸ'!

ಸಾರಾಂಶ

ಇಂದು ರಾತ್ರಿ ಡಿಸ್ಕವರಿಯಲ್ಲಿ ಮೋದಿ ಹೊಸ ಅವತಾರ| ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ| ಪ್ರಧಾನಿ ಮೋದಿ ಸಾಹಸ 180 ದೇಶಗಳಲ್ಲಿ ಪ್ರಸಾರ

ನವದೆಹಲಿ[ಆ.12]: ಯೋಗ, ಫೋಟೋಗ್ರಫಿ ಸೇರಿದಂತೆ ರಾಜಕೀಯ ಹೊರತಾಗಿ ಇತರೆ ಹಲವು ಹವ್ಯಾಸಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಮುಖ ಸೋಮವಾರ ಅನಾವರಣಗೊಳ್ಳಲಿದೆ. ಪ್ರಸಿದ್ಧ ಸಾಹಸಿಗ ಬೆಯರ್‌ ಗ್ರಿಲ್ಸ್‌ ಅವರು ನಡೆಸಿಕೊಡುವ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿರುವ ಸಂಚಿಕೆ ಸೋಮವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ ಡಿಸ್ಕವರಿ ಸಮೂಹದ 12 ಚಾನೆಲ್‌ಗಳಲ್ಲಿ ವಿಶ್ವದ 180 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ಉದ್ಯಾನದಲ್ಲಿ ಗ್ರಿಲ್ಸ್‌ ಜತೆಗೂಡಿ ಮೋದಿ ಕಳೆದ ಫೆಬ್ರುವರಿ ತಿಂಗಳಲ್ಲಿ ನಡೆಸಿದ್ದ ಸಾಹಸವನ್ನು ಈ ಕಾರ್ಯಕ್ರಮ ತೋರಿಸಲಿದ್ದು, ಮೋದಿ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರವನ್ನು ವೀಕ್ಷಕರ ಮುಂದೆ ತೆರೆದಿಡಲಿದೆ.

ಕೈಯ್ಯಲ್ಲೊಂದು ಕೋಲು, ತೆಪ್ಪದ ಸವಾರಿ, ಕಾಡಿನಲ್ಲಿ ಸಾಹಸ ಮೆರೆದ ಪಿಎಂ ಮೋದಿ!

44 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದ ದಿನವೇ, ಅಂದರೆ ಫೆ.14ರಂದು ಈ ಕಾರ್ಯಕ್ರಮದ ಚಿತ್ರೀಕರಣ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಅವರು ಅರಣ್ಯ ಹಾಗೂ ತಮ್ಮ ನಡುವಿರುವ ಸಂಬಂಧ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್