ಕಾಶ್ಮೀರಿ ಭೂಮಿ, ವಧು ಹುಡುಕಾಟದಲ್ಲಿ ಕನ್ನಡಿಗರು ಮುಂಚೂಣಿಯಲ್ಲಿ!

By Web DeskFirst Published Aug 12, 2019, 7:44 AM IST
Highlights

ಕಾಶ್ಮೀರಿ ಭೂಮಿ, ವಧು ಹುಡುಕಾಟದಲ್ಲಿ ಕನ್ನಡಿಗರು ಮುಂಚೂಣಿಯಲ್ಲಿ!| 370ನೇ ವಿಧಿ ರದ್ದಾದ ಮಾರನೇ ದಿನ ಅಂತರ್ಜಾಲದಲ್ಲಿ ಕಾಶ್ಮೀರ ವಿಷಯಗಳಿಗೆ ನೆಟ್ಟಿಗರಿಂದ ಭಾರೀ ಹುಡುಕಾಟ

ನವದೆಹಲಿ[ಆ.12]: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35ಎ ನೇ ವಿಧಿ ರದ್ದಾದ ಬೆನ್ನಲ್ಲೇ, ಕಾಶ್ಮೀರಿ ಯುವತಿಯನ್ನು ಮದುವೆಯಾಗುವ ಇತರೆ ರಾಜ್ಯದ ಪುರುಷರಿಗೂ, ಕಾಶ್ಮೀರದ ಯುವತಿಯರ ಮದುವೆಯಾದ ಆಸ್ತಿಯ ಮೇಲಿನ ಹಕ್ಕು ಸಿಗುತ್ತದೆ. ಹೊರ ರಾಜ್ಯದವರೂ ಇನ್ನು ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು ಎಂಬ ಮಾಹಿತಿ ಇತ್ತೀಚಿನ ದಿನಗಳಲ್ಲಿ ಭಾರೀ ವೈರಲ್‌ ಆಗಿದೆ.

ವಿಶೇಷವೆಂದರೆ ಕೇಂದ್ರ ಸರ್ಕಾರ ಆ.5 ರಂದು 370ನೇ ವಿಧಿ ರದ್ದು ಮಾಡಿದ ಮಾರನೇ ದಿನ ಅಂದರೆ ಆ.6ರಂದು ಅಂತರ್ಜಾಲ ತಾಣ ಗೂಗಲ್‌ನಲ್ಲಿ ಕಾಶ್ಮೀರದಲ್ಲಿ ಭೂಮಿ ಖರೀದಿಸುವುದು ಹೇಗೆ, ಕಾಶ್ಮೀರಿ ಬಾಲಕಿಯರನ್ನು ಮದುವೆಯಾಗುವುದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಭಾರೀ ಹುಡುಕಾಟ ನಡೆದಿದೆ. ಹೀಗೆ ಹುಡುಕಾ ನಡೆಸಿದವರಲ್ಲಿ ಕನ್ನಡಿಗರು ಮುಂಚೂಣಿಯಲ್ಲಿದ್ದಾರೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಜಾಗವನ್ನು ಖರೀದಿಸುವುದು ಹೇಗೆ ಎಂಬ ವಿಚಾರದ ಹುಡುಕಾಟದಲ್ಲಿ ಕರ್ನಾಟಕ ನಂ.4 ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನದಲ್ಲಿ ಹರ್ಯಾಣ, ಉತ್ತರಪ್ರದೇಶ,ಮಹಾರಾಷ್ಟ್ರದ ನೆಟ್ಟಿಗರಿದ್ದಾರೆ. ಇನ್ನು ಕಾಶ್ಮೀರದಲ್ಲಿ ಜಾಗ ಖರೀದಿ ಎಂಬ ವಿಷಯದ ಹುಡುಕಾಟದಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದುಕೊಂಡಿದೆ.

ಇನ್ನೊಂದು ವಿಶೇಷವೆಂದರೆ ಮ್ಯಾರಿ ಕಾಶ್ಮೀರಿ ಗರ್ಲ್ಸ್ ಮತ್ತು ಕಾಶ್ಮೀರಿ ಗರ್ಲ್ಸ್ ಎಂಬ ವಿಷಯಗಳ ಹುಡುಕಾಟದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ದೆಹಲಿ ಇದ್ದರೆ, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ.

ಗೂಗಲ್‌ ಹುಡುಕಾಟ ಕಾಶ್ಮೀರದಲ್ಲಿ ಜಾಗ ಖರೀದಿ ಹೇಗೆ

1. ಹರ್ಯಾಣ

2. ಉತ್ತರಪ್ರದೇಶ

3. ಮಹಾರಾಷ್ಟ್ರದ

4. ಕರ್ನಾಟಕ

ಮ್ಯಾರಿ ಕಾಶ್ಮೀರಿ ಗರ್ಲ್ಸ್

1. ದೆಹಲಿ

2. ಮಹಾರಾಷ್ಟ್ರ

3. ಕರ್ನಾಟಕ

click me!