ಕಾಶ್ಮೀ​ರ​ದಾ​ದ್ಯಂತ ನಿಷೇಧಾಜ್ಞೆಯಿಂದ 1000 ಕೋಟಿ ನಷ್ಟ!

Published : Aug 12, 2019, 08:07 AM IST
ಕಾಶ್ಮೀ​ರ​ದಾ​ದ್ಯಂತ ನಿಷೇಧಾಜ್ಞೆಯಿಂದ 1000 ಕೋಟಿ ನಷ್ಟ!

ಸಾರಾಂಶ

ಕಾಶ್ಮೀ​ರ​ದಾ​ದ್ಯಂತ ನಿಷೇಧಾಜ್ಞೆಯಿಂದ 1000 ಕೋಟಿ ನಷ್ಟ| ದಿನ​ನಿತ್ಯ ಕನಿಷ್ಠ 175 ಕೋಟಿ ರು. ನಷ್ಟಉಂಟಾ​ಗಿದೆ| ನಿಷೇ​ಧಾ​ಜ್ಞೆ​ಯಿಂದಾಗಿ ಬೇಕರಿ ಹಾಗೂ ಜಾನು​ವಾರು ಉದ್ಯ​ಮಿ​ಗಳು ಹೆಚ್ಚಿನ ತೊಂದರೆ 

ಶ್ರೀನ​ಗ​ರ[ಆ.12]: ಸಂವಿ​ಧಾ​ನದ 370 ನೇ ವಿಧಿ ರದ್ದಿನಿಂದ ಉಂಟಾ​ಗ​ಬ​ಹು​ದಾದ ಸಂಭಾವ್ಯ ಹಿಂಸಾಚಾರ ತಪ್ಪಿ​ಸಲು, ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಜಮ್ಮು ಕಾಶ್ಮೀ​ರ​ದಾ​ದ್ಯಂತ ವಿಧಿಸಲಾಗಿದ್ದ ನಿಷೇ​ಧಾ​ಜ್ಞೆ​ಯಿಂದಾಗಿ ಕಳೆದ ಒಂದು ವಾರ​ದಲ್ಲಿ ಸುಮಾರು 1000 ಕೋಟಿಯಷ್ಟು ವ್ಯಾಪಾರವನ್ನು ಉದ್ಯ​ಮಿ​ಗಳು ಕಳೆ​ದು​ಕೊಂಡಿ​ದ್ದಾ​ರೆ.

ನಿಷೇ​ಧಾಜ್ಞೆ ವಿಧಿ​ಸಿ​ದ್ದ​ರಿಂದ ಜನ ಜೀವನ ಸ್ಥಬ್ದ​ಗೊಂಡಿತ್ತು, ಇದ​ರಿಂದ ದಿನ​ನಿತ್ಯ ಕನಿಷ್ಠ 175 ಕೋಟಿ ರು. ನಷ್ಟಉಂಟಾ​ಗಿದೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ತಿಳಿ​ಸಿದೆ. ನಿಷೇ​ಧಾ​ಜ್ಞೆ​ಯಿಂದಾಗಿ ಬೇಕರಿ ಹಾಗೂ ಜಾನು​ವಾರು ಉದ್ಯ​ಮಿ​ಗಳು ಹೆಚ್ಚಿನ ತೊಂದರೆ ಅನು​ಭ​ವಿ​ಸಿದ್ದು, ಜನ ಮನೆ​ಯಿಂದ ಹೊರಗೆ ಬಾರದೆ ಇದ್ದುದ್ದು ಹಾಗೂ ಅವು​ಗ​ಳಿಗೆ ಕಡಿಮೆ ಬಾಳಿಕೆ ಇರು​ವು​ದ​ರಿಂದ ಸುಮಾರು 200 ಕೋಟಿ ಕಳೆ​ದು​ಕೊಂಡಿದ್ದಾರೆ ಎಂದು ಮಂಡಳಿ ಹೇಳಿ​ದೆ.

ಬಕ್ರೀದ್‌ ವೇಳೆ​ಯಲ್ಲೇ ನಿಷೇ​ಧಾಜ್ಞೆ ಇದ್ದಿ​ದ್ದ​ರಿಂದ ಆಡು, ಕುರಿ ಹಾಗೂ ಮೇಕೆ ಮಾರಾಟ ಭಾರೀ ಕುಸಿತ ಕಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು: ಎರಡೂ ಬಣಗಳಿಂದ ಘೋಷಣೆಗಳ ಸಮರ
ಪವಿತ್ರ ಶಕ್ತಿ ಮೇಲೆ ಬಿಜೆಪಿ, ಆರೆಸ್ಸೆಸ್‌ ದಾಳಿ: ಸಿಎಂ ಸಿದ್ದರಾಮಯ್ಯ ಕಿಡಿ