ಕಾಂಗ್ರೆಸ್ ಕಾಲದಲ್ಲಿನ ಭ್ರಷ್ಟಾಚಾರ ಬ್ರಿಟಿಷ್ ಆಳ್ವಿಕೆಗಿಂತಲೂ ಹೆಚ್ಚಾಗಿತ್ತು: ಮೋದಿ

Published : Nov 05, 2017, 10:08 PM ISTUpdated : Apr 11, 2018, 01:08 PM IST
ಕಾಂಗ್ರೆಸ್ ಕಾಲದಲ್ಲಿನ ಭ್ರಷ್ಟಾಚಾರ ಬ್ರಿಟಿಷ್ ಆಳ್ವಿಕೆಗಿಂತಲೂ ಹೆಚ್ಚಾಗಿತ್ತು: ಮೋದಿ

ಸಾರಾಂಶ

ಕಾಂಗ್ರೆಸ್​ ಸರಕಾರ ಆಡಳಿತ ಕಾಲದಲ್ಲಿನ ಭ್ರಷ್ಟಾಚಾರ ಬ್ರಿಟಿಷ್ ಆಳ್ವಿಕೆಗಿಂತಲೂ ಹೆಚ್ಚಾಗಿತ್ತು ಎಂದು ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ  ನಡೆಸಿದರು.

ನವದೆಹಲಿ (ನ.05): ಕಾಂಗ್ರೆಸ್​ ಸರಕಾರ ಆಡಳಿತ ಕಾಲದಲ್ಲಿನ ಭ್ರಷ್ಟಾಚಾರ ಬ್ರಿಟಿಷ್ ಆಳ್ವಿಕೆಗಿಂತಲೂ ಹೆಚ್ಚಾಗಿತ್ತು ಎಂದು ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ  ನಡೆಸಿದರು.

ಹಿಮಾಚಲ ಪ್ರದೇಶದ ಕುಲುದಲ್ಲಿ  ನಡೆದ ಚುನಾವಣಾ ರ್ಯಾಲಿಯಲ್ಲಿ  ಭಾಗವಹಿಸಿದ್ದ ಪ್ರಧಾನಿ ಮೋದಿ ಕಾಂಗ್ರೆಸ್​ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಮಹಾತ್ಮ ಗಾಂಧಿ ಕಾಲದಲ್ಲಿ ದೇಶದಲ್ಲಿ ಭ್ರಷ್ಟಾಚಾರದ ಸೊಕ್ಕು ಸಹ ಇರಲಿಲ್ಲ.  ಆದರೆ ಕಾಂಗ್ರೆಸ್​ ಸರಕಾರದ ಆಡಳಿತದಲ್ಲಿ ಹತ್ತು ಹಲವು ಹಗರಣಗಳ ಮೂಲಕ ದೇಶಕ್ಕೆ ಕಪ್ಪು ಚುಕ್ಕೆಯನ್ನು ಅಂಟಿಸಿದೆ. ಈ ಚುನಾವಣೆಯಲ್ಲಿ  ಹಿಮಾಚಲದ ಜನ ಎರಡು ಕೆಲಸ ಮಾಡಲು ನಿರ್ಧರಿಸಿದ್ದಾರೆ.  ಒಂದು ವಿಕಾಸ ತತ್ವದ ಮೇಲೆ ಸಾಗುವ ಬಿಜೆಪಿಗೆ ಅಧಿಕಾರ ನೀಡುವುದು ಮತ್ತೊಂದು  ರಾಜ್ಯವನ್ನು  ಲೂಟಿ ಮಾಡಿದವರನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದರು.

30 ವರ್ಷಗಳ ನಂತರ ದೇಶದಲ್ಲಿ ಬಹುಮತದ ಸರಕಾರ ರಚನೆಯಾಗಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಭಾರತದ ಚರ್ಚೆಯಾಗುತ್ತಿದೆ. ಇದಕ್ಕೆ ದೇಶದ 125 ಕೋಟಿ ಜನರ ಆರ್ಶಿವಾದವೇ ಕಾರಣವಾಗಿದೆ. ಅದರಂತೆ ವಿಕಾಸ ತತ್ವದ ಮೇಲೆ ಸಾಗುವ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿದರೆ ದೇಶದ ಎಲ್ಲಡೆ ಹಿಮಾಚಲದ ಬಗ್ಗೆ ಚರ್ಚೆಯಾಗುವಂತೆ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌