ಸದ್ಯದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಿಹಾರ್ ಜೈಲಿಗೆ ಹೋಗುವುದರಲ್ಲಿ ಅನುಮಾನವೇ ಇಲ್ಲ: ಸುಬ್ರಮಣಿಯನ್ ಸ್ವಾಮಿ

Published : Nov 05, 2017, 09:06 PM ISTUpdated : Apr 11, 2018, 01:11 PM IST
ಸದ್ಯದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಿಹಾರ್ ಜೈಲಿಗೆ ಹೋಗುವುದರಲ್ಲಿ ಅನುಮಾನವೇ ಇಲ್ಲ: ಸುಬ್ರಮಣಿಯನ್ ಸ್ವಾಮಿ

ಸಾರಾಂಶ

ಕಾಂಗ್ರೆಸ್  ಪಕ್ಷ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಅಲ್ಲ, ಇಟಲಿ ಕಾಂಗ್ರೆಸ್  ಪಾರ್ಟಿ. ಸದ್ಯದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಿಹಾರ್ ಜೈಲಿಗೆ ಹೋಗುವುದರಲ್ಲಿ ಎರಡು ಮಾತಿಲ್ಲ. ನ್ಯಾಷನಲ್ ಹೆರಾಲ್ಡ್ ಕೇಸ್'ನಲ್ಲಿ  ಕಂಪನಿಯ ಅಕೌಂಟ್ ಬುಕ್ ಕೇಳಿದ್ದೀನಿ. ಸದ್ಯದಲ್ಲಿ ಸೋನಿಯಾ, ರಾಹುಲ್ ಗಾಂಧಿ ಅವರು ಕನ್ನಿಮೂಳಿ ಡಿ ರಾಜಾ ಹಾಗೆ ಜೈಲಿಗೆ ಹೋಗುತ್ತಾರೆ ಎಂದು ಕೆ.ಎಲ್.ಇ ಜಿರಗಿ ಭವನದಲ್ಲಿ ನಡೆದ ಪ್ರಬುದ್ಧ  ಭಾರತ  ಸಮಾರಂಭದಲ್ಲಿ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಬೆಳಗಾವಿ (ನ.05): ಕಾಂಗ್ರೆಸ್  ಪಕ್ಷ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಅಲ್ಲ, ಇಟಲಿ ಕಾಂಗ್ರೆಸ್  ಪಾರ್ಟಿ.  ಸದ್ಯದಲ್ಲಿ ಸೋನಿಯಾ ಗಾಂದಿ ಮತ್ತು ರಾಹುಲ್ ಗಾಂಧಿ ತಿಹಾರ್ ಜೈಲಿಗೆ ಹೋಗುವುದರಲ್ಲಿ ಎರಡು ಮಾತಿಲ್ಲ. ನ್ಯಾಷನಲ್ ಹೆರಾಲ್ಡ್ ಕೇಸ್'ನಲ್ಲಿ  ಕಂಪನಿಯ ಅಕೌಂಟ್ ಬುಕ್ ಕೇಳಿದ್ದೀನಿ.  ಸದ್ಯದಲ್ಲಿ ಸೋನಿಯಾ ರಾಹುಲ್ ಗಾಂಧಿ ಅವರು ಕನ್ನಿಮೂಳಿ ಡಿ ರಾಜಾ ಹಾಗೆ ಜೈಲಿಗೆ ಹೋಗುತ್ತಾರೆ ಎಂದು ಕೆ.ಎಲ್.ಇ ಜಿರಗಿ ಭವನದಲ್ಲಿ ನಡೆದ ಪ್ರಬುದ್ಧ  ಭಾರತ  ಸಮಾರಂಭದಲ್ಲಿ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಕೆ.ಎಲ್.ಇ ಜಿರಗಿ ಭವನದಲ್ಲಿ ಇಂದು ನಡೆದ ಪ್ರಬುದ್ಧ  ಭಾರತ  ಸಮಾರಂಭದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ದರು.

ಟಿಪ್ಪು ಯಾವತ್ತೂ ಸ್ವಾತಂತ್ರ್ಯ ಹೋರಾಟಗಾರ ಅಲ್ಲ.  ಆತ ಫ್ರೆಂಚರಿಂದ ಹಣ ಪಡೆದು ಬ್ರಿಟಿಷರ ಜೊತೆ ಯುದ್ಧ ಮಾಡಿದ ಅಷ್ಟೇ. ಇದನ್ನೇ ಮುಂದಿಟ್ಟುಕೊಂಡು   ರಾಜ್ಯ ಸರ್ಕಾರ  ಟಿಪ್ಪು ಜಯಂತಿ ಆಚರಿಸುವುದು ಸರಿಯಲ್ಲ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದರು.   ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವ ರಾಜ್ಯ ಸರ್ಕಾರದ  ನಡೆಯನ್ನು  ವಿರೋಧಿಸಿದರು.  

ರಾಮ ಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡುತ್ತಾ, ರಾಮಮಂದಿರ  ಕಟ್ಟಿಯೇ ಕಟ್ಟುತ್ತೇವೆ.  ಭಾರತ ದೇಶದ ಹಿಂದೂಗಳು ಮೊದಲು ಒಂದಾಗಬೇಕು.  ನಾವು ಮೊದಲು ಹಿಂದೂಗಳು.  ನಂತರ ಬ್ರಾಹ್ಮಣ,  ಕ್ಷತ್ರಿಯರು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ