ರೈತರಿಗೆ ಮೋದಿ ಆಫರ್, ಕನ್ನಡದಲ್ಲಿ ವಿದ್ಯಾ ಬಾಲನ್ ಆನ್ಸರ್: ಆ.9ರ ಟಾಪ್ 10 ಸುದ್ದಿ!

By Suvarna News  |  First Published Aug 9, 2020, 5:06 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ 1 ಲಕ್ಷ ಕೋಟಿ ರೂಪಾಯಿಗಳ  ಕಿಸಾನ್ ಯೋಜನೆ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ವರದಿ ನೆಗೆಟಿವ್ ಬಂದಿದೆ.  ಚೀನಾದ ಸರಕುಗಳಿಗೆ ಭಾರತ ರಕ್ಷಣಾ ಸಚಿವಾಲಯ ನಿರ್ಬಂಧ ಹೇರಿದೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಕನ್ನಡದಲ್ಲಿ ಬೈದಿರುವ ವಿಡಿಯೋ ವೈರಲ್ ಆಗಿದೆ. ರಣಜಿ ಸೇರಿದಂತೆ ದೇಸಿ ಟೂರ್ನಿ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ರಾಮ ಮಂದಿರಕ್ಕೆ ನಟಿ ರಮ್ಯಾ ಜೈ, ಶ್ರೀಮಂತರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲಕ್ಕೇರಿದೆ ಅಂಬಾನಿ ಸೇರಿದಂತೆ ಆಗಸ್ಟ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


1 ಲಕ್ಷ ಕೋಟಿ ಕೃಷಿ ಸೌಕರ್ಯ ಉದ್ಘಾಟಿಸಿದ ಪಿಎಂ: ಕಿಸಾನ್ ಯೋಜನೆಯ 6ನೇ ಕಂತು ಬಿಡುಗಡೆ!...

Latest Videos

undefined

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ 1 ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿ ಯೋಜನೆಯನ್ನು ಉದ್ಘಾಟಿಸಿದ್ದಾರೆ. 

ಕೊರೋನಾ ಮುಕ್ತರಾದ ಗೃಹ ಸಚಿವ ಅಮಿತ್ ಶಾ!...

 ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ವರದಿ ನೆಗೆಟಿವ್ ಬಂದಿದ್ದು, ಅವರು ಮಹಾಮಾರಿಯಿಂದ ಮುಕ್ತಿ ಪಡೆದಿದ್ದಾರೆ. ಬಿಜೆಪಿ ಸಂಸದ ಮನೋಜ್ ತಿವಾರಿ ಟ್ವೀಟಟ್ ಮಾಡಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಆಗಸ್ಟ್ 2ರಂದು ಅಮಿತ್ ಶಾರವರ ಕೊರೋನಾ ವೈರಸ್ ವರದಿ ಪಾಸಿಟಿವ್ ಎಂದು ಬಂದಿತ್ತು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ರಕ್ಷಣಾ ಉತ್ಪನ್ನಗಳ ಆಮದಿಗೆ ಬ್ರೇಕ್: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!...

ಮೊಬೈಲ್‌ ಆಪ್‌ಗಳನ್ನು ಬ್ಯಾನ್‌ ಮಾಡಿ ಬೆನ್ನಲ್ಲೇ 101 ಚೀನಾ ರಕ್ಷಣಾ ಸರಕುಗಳಿಗೆ ನಿರ್ಬಬಂಧ ಹೇರಿರುವ ಕೇಂದ್ರ ರಕ್ಷಣಾ ಇಲಾಖೆ, ಭಾರತದಲ್ಲೇ ಇವುಗಳನ್ನು ಉತ್ಪಾದಿಸುವ ಕುರಿತು ಮಹಹತ್ವದ ಘೋಷಣೆ ಮಾಡಿದೆ. 

ವಿಮಾನ ದುರಂತ: ಸಹ ಪೈಲಟ್‌ ಪತ್ನಿ ಗರ್ಭಿಣಿ, ಆಕೆಗಿನ್ನೂ ಪತಿ ಸಾವು ಗೊತ್ತಿಲ್ಲ!...

ವಿಮಾನ ಅಪಘಾತದಲ್ಲಿ ಮಡಿದ ಸಹಾಯಕ ಪೈಲಟ್‌ ಅಖಿಲೇಶ್‌ ಕುಮಾರ್‌ ಅವರ ಪತ್ನಿ ಗರ್ಭಿಣಿ. ಇನ್ನು 10-15 ದಿನಗಳಲ್ಲಿ ಅವರಿಗೆ ಹೆರಿಗೆ ದಿನ ನಿಗದಿಯಾಗಿದೆ ಎಂಬ ಕರುಣಾಜನಕ ವಿಷಯ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಆಘಾತವಾಗದೇ ಇರಲಿ ಎನ್ನುವ ಕಾರಣಕ್ಕೆ ಅವರಿಗೆ ಇನ್ನೂ ಪತಿಯ ಸಾವಿನ ವಿಷಯ ತಿಳಿಸಿಲ್ಲ. ಉತ್ತರ ಪ್ರದೇಶದ ಮಥುರಾ ಮೂಲದ ಅಖಿಲೇಶ್‌ ಅವರು 2017ರಲ್ಲಿ ಮೇಘಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ರಣಜಿ ಸೇರಿದಂತೆ ದೇಶಿ ಟೂರ್ನಿ ಆರಂಭ ದಿನಾಂಕ ಪ್ರಕಟಿಸಿದ ಬಿಸಿಸಿಐ!...

ಕೊರೋನಾ ವೈರಸ್ ಕಾರಣ ಬಿಸಿಸಿಐ ವೇಳಾಪಟ್ಟಿ ಬುಡಮೇಲಾಗಿದೆ. ಕೆಲ ಟೂರ್ನಿಗಳು ರದ್ದಾಗಿದೆ. ಇದೀಗ ಸತತ ಪ್ರಯತ್ನದ ಮೂಲಕ ಐಪಿಎಲ್ ಟೂರ್ನಿ ಆಯೋಜನೆಗೆ ಸಿದ್ದತೆ ನಡೆಸಿದೆ. ದುಬೈನಲ್ಲಿ  ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ. ಇದೀಗ ಬಿಸಿಸಿಐ ರಣಜಿ, ಸಯ್ಯದ್ ಮುಷ್ತಾಕ್ ಆಲಿ ಸೇರಿದಂತೆ ದೇಶಿ ಟೂರ್ನಿಗಳ ಆರಂಭ ದಿನಾಂಕ ನಿಗದಿ ಪಡಿಸಿದೆ.

ಸೈಲೆಂಟಾಗಿ ರಾಮ ಮಂದಿರ ಸಪೋರ್ಟ್ ಮಾಡಿದ್ರಾ ರಮ್ಯಾ..? ಏನಿದು ಹೊಸ ನಡೆ...

ನಟಿ ರಮ್ಯಾ ಮುಂದೇನ್ಮಾಡ್ತಾರೆ..? ಮದ್ವೆಯಾಗ್ತಾರಾ..? ರಾಜಕೀಯಕ್ಕೆ ಬರ್ತಾರಾ..? ಅಥವಾ ಸಿನಿಮಾ ಮಾಡ್ತಾರಾ..? ಸದ್ಯ ರಮ್ಯಾ ನೀಡಿರುವ ಹೇಳಿಕೆ ಅವರನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದೆ.

ನಟಿ ವಿದ್ಯಾ ಬಾಲನ್ ಕನ್ನಡದಲ್ಲಿ ಬೈಯೋದನ್ನ ನೋಡಿದ್ದೀರಾ..? ಇಲ್ನೋಡಿ ವಿಡಿಯೋ...

ನಿರೂಪಕ ನಟ ಡ್ಯಾನಿಷ್ ಸೇಠ್ ವಿದ್ಯಾ ಬಾಲನ್ ಜೊತೆ ಮಾತನಾಡಿದ್ದು ನಟಿ ಇಂಟರ್‌ವ್ಯೂನಲ್ಲಿ ಜಾಲಿಯಾಗಿ ಮಾತನಾಡಿದ್ದಾರೆ. ವಿದ್ಯಾ ಬಾಲನ್ ಕನ್ನಡ ಪ್ರೀತಿ ಮತ್ತು ಡ್ಯಾನಿಷ್ ಕಾಮಿಡಿಯನ್ನು ಜನ ಮೆಚ್ಚಿ ಎಂಜಾಯ್ ಮಾಡಿದ್ದಾರೆ.

ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಶ್ರೀಮಂತ...

ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಸಿರಿವಂತನಾಗಿ ಹೊರ ಹೊಮ್ಮಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಅನ್ವಯ 6.048 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ. 

ಹಾವೇರಿ: ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕ

ಪ್ರವಾಹದಲ್ಲಿ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ನಡೆದಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ವರದಾ ನದಿ ತುಂಬಿ ಹರಿಯುತ್ತಿದೆ. ಜಿಲ್ಲೆಯ ಎಲ್ಲ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ.


ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ EV ಕಂಪನಿಗಳೇ ದಂಗು!...

ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕಾಗಿ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಸಬ್ಸಡಿ, ಪ್ರೋತ್ಸಾಹಕ ಧನ ಸೇರಿದಂತೆ ಕೆಲ ಸ್ಕೀಮ್‌ಗಳು ಚಾಲ್ತಿಯಲ್ಲಿದೆ. ಆದರೂ ಎಲೆಕ್ಟ್ರಿಕ್ ವಾಹನ(EV)ಬೆಲೆ ದುಬಾರಿ. ಇದೀಗ ರಾಯಲ್ ಎನ್‌ಫೀಲ್ಡ್ ಬೈಕನ್ನು ಇದೀಗ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದು, EV ಕಂಪನಿಗಳೆ ದಂಗಾಗಿದೆ. ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

click me!