ಮೋದಿಗೆ ವಿಶ್ವಸಂಸ್ಥೆಯ ಅತಿ ದೊಡ್ಡ ಗೌರವ

By Web DeskFirst Published Sep 27, 2018, 10:51 AM IST
Highlights

 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಅತಿ ದೊಡ್ಡ ಗೌರವ ದೊರಕಿದೆ. ಚಾಂಪಿಯನ್ಸ್‌ ಆಫ್‌ ಅರ್ತ್ ಗೌರವವನ್ನು ಘೋಷಿಸಲಾಗಿದೆ

ನವದೆಹಲಿ :  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಅತಿ ದೊಡ್ಡ ಪ್ರಶಸ್ತಿ ಎನ್ನಿಸಿಕೊಂಡಿರುವ ‘ಚಾಂಪಿಯನ್ಸ್‌ ಆಫ್‌ ಅತ್‌ರ್‍’ ಗೌರವವನ್ನು ಘೋಷಿಸಲಾಗಿದೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಅವರ ಜತೆ ಮೋದಿ ಈ ಗೌರವವನ್ನು ಹಂಚಿಕೊಳ್ಳಲಿದ್ದಾರೆ.

‘ಪಾಲಿಸಿ ಆಫ್‌ ಲೀಡರ್‌ಶಿಪ್‌’ ವಿಭಾಗದಲ್ಲಿ ಮೋದಿ ಅವರಿಗೆ ಈ ಗೌರವ ಪ್ರಾಪ್ತಿಯಾಗಿದೆ. ಇದೇ ವೇಳೆ ಇತರ ಬೇರೆ ಬೇರೆ ವಿಭಾಗಗಳಲ್ಲಿ 4 ಜನ ಪರಿಸರ ತಜ್ಞರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ. ಇದೇ ವೇಳೆ 2022ಕ್ಕೆ ಸಂಪೂರ್ಣ ಪ್ಲಾಸ್ಟಿಕ್‌ ಬಳಕೆ ನಿರ್ಮೂಲನೆ ವಾಗ್ದಾನವನ್ನು ಕೂಡ ಗೌರವವನ್ನು ಘೋಷಿಸುವಾಗ ವಿಶೇಷವಾಗಿ ಉಲ್ಲೇಖಿಸಲಾಗಿದೆ.

ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಜಾಗತಿಕ ಪರಿಸರ ಒಪ್ಪಂದದ ಮುಂಚೂಣಿ ಸ್ಥಾನ ವಹಿಸಿದ್ದಕ್ಕಾಗಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಇದೇ ವೇಳೆ, ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇತರ ನಾಲ್ವರಲ್ಲಿ ಪ್ರಶಸ್ತಿ ಪಡೆದಿದ್ದು ವಿಶೇಷ. ಸುಸ್ಥಿರ ಇಂಧನ ಬಳಕೆಗೆ ಮುಂದಾಳತ್ವ ವಹಿಸಿರುವುದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ ಬರಲು ಕಾರಣ.

click me!