ಕೇರಳ ಪ್ರವಾಹಕ್ಕೆ ನೆರವು ನೀಡಲು ಸದಾ ಸಿದ್ಧ : ಪಾಕ್ ಪಿಎಂ

Published : Aug 24, 2018, 12:41 PM ISTUpdated : Sep 09, 2018, 09:07 PM IST
ಕೇರಳ ಪ್ರವಾಹಕ್ಕೆ ನೆರವು ನೀಡಲು ಸದಾ ಸಿದ್ಧ : ಪಾಕ್ ಪಿಎಂ

ಸಾರಾಂಶ

ಕೇರಳದಲ್ಲಿ  ಉಂಟಾದ ಪ್ರವಾಹ ಪರಿಸ್ಥಿತಿಗೆ ಯಾವುದೇ ರೀತಿಯ ನೆರವು ನೀಡಲು ನಾವು ಸಿದ್ಧ. ಭಾರತಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಇಸ್ಲಮಬಾದ್ :  ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಎದುರಾದ ದುಸ್ಥಿತಿಯನ್ನು ನಿವಾರಿಸಲು ಎಲ್ಲೆಡೆಯಿಂದ ನೆರವು ಹರಿದುಬರುತ್ತಿದೆ. 

ಇದೀಗ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರೂ ಕೂಡ ಕೇರಳದಲ್ಲಿ ಎದುರಾದ ಪ್ರವಾಹ ಪರಿಸ್ಥಿತಿಗೆ ಪಾಕಿಸ್ಥಾನ ಯಾವುದೇ ರೀತಿಯಾದ ಸಹಕಾರವನ್ನೂ ಕೂಡ ನೀಡಲು ಸಿದ್ಧವಿದೆ ಎಂದು ಹೇಳಿದ್ದಾರೆ. 

ಅಲ್ಲದೇ ಶೀಘ್ರವೇ ಇಂತ ದುಸ್ಥಿತಿ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ. 

ನಮ್ಮ ಪಕ್ಕದ ದೇಶಕ್ಕೆ ಯಾವುದೇ ರೀತಿಯ ಬೆಂಬಲವನ್ನೂ ಕೂಡ ನೀಡಲು ನಾವು ಸಿದ್ಧವಾಗಿದ್ದೇವೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. 

ಭಾರತದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪಾಕಿಗಳೆಲ್ಲರೂ ಕೂಡ ಪ್ರಾರ್ಥಿಸುತ್ತಾರೆ ಎಂದು ಹೇಳಿದ್ದಾರೆ. 

ಆದರೆ ಈಗಾಗಲೇ ವಿವಿಧ ದೇಶಗಳು ಪ್ರವಾಹ ಪರಿಸ್ಥಿತಿಗೆ ನೆರವು ನೀಡಲು ಸಿದ್ಧವಾಗಿದ್ದರೂ ಭಾರತ ಸರ್ಕಾರ ಅದನ್ನು ನಿರಾಕರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BLO Death: ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಂತಿತು ಉಸಿರು! ಎಸ್‌ಐಆರ್ ಸಭೆ ಬೆನ್ನಲ್ಲೇ ಬಿಎಲ್‌ಒ ರತ್ನಮ್ಮ ಸಾವು; ಅಸಲಿ ಕಾರಣ ಏನು ಗೊತ್ತಾ?
Oil Crisis: ತೈಲ ಬಿಕ್ಕಟ್ಟಿನ ನಡುವೆ ಭಾರತದ 3 ಬಿಗ್ ಗೇಮ್ ಪ್ಲಾನ್: ಜಾಗತಿಕ ಮಾರ್ಕೆಟ್ ಕಿಂಗ್ ಆದ ಭಾರತ! 2030ರ ವೇಳೆಗೆ ಜಗತ್ತೇ ದಿಲ್ಲಿಯ ಮುಂದೆ ಕೈಚಾಚಲಿದೆ!