
ವಿಜಯಪುರ(ಆ.24] ಶೌಚಕ್ಕೆಂದು ಬಯಲಿಗೆ ಬಂದ ಮಹಿಳೆಯರ ಅರೆ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತ ಕಾಮಿಯೋರ್ವ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದಾನೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ 26 ವರ್ಷದ ಸಲೀಂ ಭಾಗವಾನ್ ಪರಾರಿಯಾದ ಆಸಾಮಿ. ಈತ ಪಟ್ಟಣದ ಇಂಡಿ ಹೋಟೆಲ್ ಮಾಲೀಕನ ಮಗ. ಪಾಟೀಲ್ ನಗರದಲ್ಲಿರುವ ಕಟ್ಟಡವೊಂದರ ಪಕ್ಕ ಮಹಿಳೆಯರು ಬಯಲು ಶೌಚಕ್ಕೆ ಬರುತ್ತಿದದ್ದರು. ಇದನ್ನೇ ವಿಕೃತ ಕಾಮಿ ತನ್ನ ಲಾಭಕ್ಕೆ ಬಳಸಿಕೊಂಡಿದ್ದ. ಚಿತ್ರ ಸೆರೆಹಿಡಿದು ಅದನ್ನು ಮಹಿಳೆಯರಿತೆ ತೋರಿಸಿ ಅಕ್ರಮ ಸಂಬಂಧ ಬೆಳೆಸಲು ಯತ್ನಿಸುತ್ತಿದ್ದ.
ಮುಳ್ಳಿನ ಪೊದೆಯಲ್ಲಿ ತನಗೆ ಮಲಗಿಕೊಳ್ಳಲು ಮಾತ್ರವಲ್ಲದೆ ಮದಯ, ಸಿಗರೇಟು ಇಟ್ಟು ಕುಳಿತುಕೊಳ್ಳು ಜಾಗ ಮಾಡಿಕೊಂಡಿದ್ದ. ಶೌಚಕ್ಕೆಂದು ಬಂದ ಮಹಿಳೆಯೊಬ್ಬಳು ಸಲಿಂನನ್ನು ಕಂಡುಚೀರಿದ್ದಾರೆ. ಮಹಿಳೆ ಚೀರಾಟ ಕೇಳಿ ಸಾರ್ವಜನಿಕರು ಅಲ್ಲಿಗೆ ಬರುವಷ್ಟರಲ್ಲೇ ಸಲೀಂ ಪರಾರಿಯಾಗಿದ್ದಾನೆ.
ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದಿರುವ ಮಹಿಳೆಯರು ಇಂಡಿ ಹೋಟೆಲ್ ತೆರೆಯಲು ಅವಕಾಶ ನೀಡದೇ ನಮಗೆ ನ್ಯಾಯ ಕೊಡಿಸಿ ಎಂದು ಚಡಚಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.