ಉತ್ತಮ ವಿದ್ಯುತ್ ಸರಬರಾಜಿಗೆ ಯೋಗಿ ಆದಿತ್ಯನಾಥ್ ಮಾಸ್ಟರ್'ಪ್ಲಾನ್

By Suvarna Web DeskFirst Published Apr 7, 2017, 10:20 AM IST
Highlights

* ಬಡತನ ರೇಖೆಗಿಂತ ಮೇಲಿರುವ ಸಾಮಾನ್ಯ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನೂರು ಪ್ರತಿಶತ ಹಣಕಾಸು ನೆರವು
* ಜಾತಿ, ಮತ ಭೇದವಿಲ್ಲದೇ, ಇತ್ತೀಚಿನ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧಾರದ ಮೇಲೆ ವಿದ್ಯುತ್ ಸಂಪರ್ಕ.
* ವಿದ್ಯುತ್ ಕಳ್ಳತನ ತಡೆಗಟ್ಟಲು ಸಕಲ ರೀತಿಯಲ್ಲಿ ಪ್ರಚಾರ. ವಿದ್ಯುತ್ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆ ತರಲು ಯೋಜನೆ

ಲಕ್ನೋ(ಏ. 07): ಉತ್ತರಪ್ರದೇಶದಲ್ಲಿನ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಿರುವ ಯೋಗಿ ಆದಿತ್ಯನಾಥ್ ಈಗ ವಿದ್ಯುತ್ ಇಲಾಖೆಯಲ್ಲಿ ಒಂದಷ್ಟು ಸುಧಾರಣೆ ತರಲು ಯತ್ನಿಸಿದ್ದಾರೆ. ರಾಜ್ಯದಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಪುಷ್ಟಿ ನೀಡಲು ಮಾಸ್ಟರ್'ಪ್ಲಾನ್ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೈಗೊಂಡ, ಕೈಗೊಳ್ಳಲಿರುವ ಕ್ರಮಗಳು ಹಾಗೂ ಆದೇಶಗಳು ಇಲ್ಲಿವೆ.

* ನೂರು ದಿನದಲ್ಲಿ 5 ಲಕ್ಷ ಹೊಸ ವಿದ್ಯುತ್ ಸಂಪರ್ಕ

Latest Videos

* ಹಳೆಯ ಟ್ರಾನ್ಸ್'ಫಾರ್ಮರ್'ಗಳನ್ನು ಬದಲಿಸಲು ಆದೇಶ. ನಗರ ಪ್ರದೇಶದಲ್ಲಿಲ 24 ಗಂಟೆಯೊಳಗೆ, ಹಾಗೂ ಗ್ರಾಮೀಣ ಪ್ರದೇಶದಲ್ಲಿ 48 ಗಂಟೆಯೊಳಗೆ ಹೊಸ ಟ್ರಾನ್ಸ್'ಫಾರ್ಮರ್'ನ ವ್ಯವಸ್ಥೆಯಾಗಬೇಕೆಂದು ಆದೇಶ

* ಗ್ರಾಮೀಣ ಭಾಗದಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲು ಆದೇಶ

* ಏ.14ರಿಂದ ಗ್ರಾಮೀಣ ಭಾಗದಲ್ಲಿ ದಿನಕ್ಕೆ ಕನಿಷ್ಠ 18 ಗಂಟೆವರೆಗೆ ವಿದ್ಯುತ್ ವ್ಯವಸ್ಥೆ

* ಬಡ ಬಿಪಿಎಲ್ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

* ಬಡತನ ರೇಖೆಗಿಂತ ಮೇಲಿರುವ ಸಾಮಾನ್ಯ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನೂರು ಪ್ರತಿಶತ ಹಣಕಾಸು ನೆರವು

* ಜಾತಿ, ಮತ ಭೇದವಿಲ್ಲದೇ, ಇತ್ತೀಚಿನ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧಾರದ ಮೇಲೆ ವಿದ್ಯುತ್ ಸಂಪರ್ಕ.

* ವಿದ್ಯುತ್ ಕಳ್ಳತನ ತಡೆಗಟ್ಟಲು ಸಕಲ ರೀತಿಯಲ್ಲಿ ಪ್ರಚಾರ. ವಿದ್ಯುತ್ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆ ತರಲು ಯೋಜನೆ.

* ಸ್ಮಾರ್ಟ್'ಮೀಟರಿಂಗ್ ಅಳವಳಿಕೆ

* ವಿದ್ಯುತ್ ಬಿಲ್ ಬಾಕಿಯ ಮೇಲಿನ ಬಡ್ಡಿ ಮನ್ನಾ. ಅಸಲಿ ಮೊತ್ತದ ಪಾವತಿಗೆ ಇಎಂಐ ಅವಕಾಶ.

* ವಿದ್ಯುತ್ ಪೂರೈಕೆ ವ್ಯವಸ್ಥೆಯಲ್ಲಿ ಸರಕಾರಿ ಅಧಿಕಾರಿಯ ಕೈಲಿಲ್ಲ ಸಂಪೂರ್ಣ ಅಧಿಕಾರ

click me!