ತ್ರಿವಳಿ ತಲಾಖ್'ಗೆ ಹೆದರಿ ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ

Published : Apr 07, 2017, 09:32 AM ISTUpdated : Apr 11, 2018, 01:01 PM IST
ತ್ರಿವಳಿ ತಲಾಖ್'ಗೆ ಹೆದರಿ ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ

ಸಾರಾಂಶ

ತ್ರಿವಳಿ ತಲಾಖ್'ಗೆ ಹೆದರಿದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ಮದುವೆಯಾಗಿರುವ ವಿಚಾರ ತಿಳಿದು ಬಂದಿದೆ. ವಿಧಿ ವಿಧಾನಗಳ ಅನುಸಾರ ನಡೆದ ಈ ಮದುವೆಗೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಹುಡುಗನ ಮೇಲೆ ಹಲ್ಲೆ ನಡೆಸುವ ಯತ್ನವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತವಾಗಿದ್ದಾರೆ.

ಉತ್ತರಪ್ರದೇಶ(ಎ.07): ತ್ರಿವಳಿ ತಲಾಖ್'ಗೆ ಹೆದರಿದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ಮದುವೆಯಾಗಿರುವ ವಿಚಾರ ತಿಳಿದು ಬಂದಿದೆ. ವಿಧಿ ವಿಧಾನಗಳ ಅನುಸಾರ ನಡೆದ ಈ ಮದುವೆಗೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಹುಡುಗನ ಮೇಲೆ ಹಲ್ಲೆ ನಡೆಸುವ ಯತ್ನವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತವಾಗಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ನಡೆದಿದ್ದು, ಯುವತಿಯ ಹೆಸರು ಖೈರೂನ್ ಎಂದು ತಿಳಿದು ಬಂದಿದೆ. ಇನ್ನು ಇವರ ಮದುವೆ ಪೊಲೀಸ್ ಭದ್ರತೆಯಲ್ಲಿ ನೆರವೇರಿದ್ದು, ಸ್ಥಳಕ್ಕಾಗಮಿಸಿದ ಮಾಧ್ಯಮದವರಿಗೆ 'ನನಗೆ ತ್ರಿವಳಿ ತಲಾಖ್ ಎಂಬ ಕಾನೂನಿನಿಂದ ತುಂಬಾ ಭಯವಾಗಿತ್ತು. ಹೀಗಾಗಿ ನಾನು ಹಿಂದೂ ಧರ್ಮವನ್ನು ಒಪ್ಪಿಕೊಂಡೆ ಇಲ್ಲಿ ನನ್ನ ಸಂಸದಾರ ಸುರಕ್ಷಿತವಾಗಿರುತ್ತದೆ. ಮುಂದಿನ ಏಳು ಜನ್ಮಗಳಲ್ಲೂ ನನ್ನ ಪತಿ ದೀಪಕ್'ನೊಂದಿಗೆ ಇರುತ್ತೇನೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

ಮಾರ್ಚ್ 17ರಂದು ಇಬ್ಬರೂ ಊರು ಬಿಟ್ಟು ತೆರಳಿದ್ದರು. ಇದರಿಂದ ಕಂಗಾಲಾದ ಯುವತಿಯ ಪೋಷಕರು ದೀಪಕ್ ವಿರುದ್ಧ ತಮ್ಮ ಮಗಗಳನ್ನು ಅಪಹರಿಸಿದ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಖೈರೂನ್ ಮಮಾರ್ಚ್ 24ರಂದು ತನ್ನ ಹೆಸರನ್ನು ಖುಷ್ಬೂ ಎಂದು ಬದಲಾಯಿಸಿಕೊಂಡಿದ್ದಲ್ಲದೆ, ಮಾರ್ಚ್ 25ರಂದು ದೀಪಕ್'ನೊಂದಿಗೆ ಸಪ್ತಪದಿ ತುಳಿದಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಅರ್ಧ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತ: ಕಾವೇರಿ 5ನೇ ಹಂತದ ಪೈಪ್‌ಲೈನ್‌ನಲ್ಲಿ ಸೋರಿಕೆ!
ಚಿನ್ನದ ಬೆಲೆ ಲಕ್ಷ ದಾಟಿದ ಬೆನ್ನಲ್ಲೇ ಕರ್ನಾಟಕದ ಈ ಜಿಲ್ಲೆಗೆ ಜಾಕ್‌ಪಾಟ್‌, ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆ!