ವಿಮಾನದಲ್ಲಿ ಟಾಯ್ಲೆಟ್‌ ಎಂದು ನಿರ್ಗಮನ ದ್ವಾರ ತೆರೆದ ಮಹಿಳೆ!

Published : Jun 10, 2019, 07:58 AM IST
ವಿಮಾನದಲ್ಲಿ ಟಾಯ್ಲೆಟ್‌ ಎಂದು ನಿರ್ಗಮನ ದ್ವಾರ ತೆರೆದ ಮಹಿಳೆ!

ಸಾರಾಂಶ

ವಿಮಾನದಲ್ಲಿ ಟಾಯ್ಲೆಟ್‌ ಎಂದು ನಿರ್ಗಮನ ದ್ವಾರ ತೆರೆದ ಮಹಿಳೆ| ಮ್ಯಾಂಚೆಸ್ಟರ್‌ನಿಂದ ಇಸ್ಲಾಮಾಬಾದ್‌ಗೆ ಬರುತ್ತಿದ್ದ ವಿಮಾನ ರನ್‌ವೇನಲ್ಲಿ ತೆರಳುತ್ತಿದ್ದ ವೇಳೆ ಪ್ರಮಾದ

ಇಸ್ಲಮಾಬಾದ್[ಜೂ.10]: ಪಾಕಿಸ್ತಾನದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಟಾಯ್ಲೆಟ್‌ಗೆ ಹೋಗುವ ಆತುರದಲ್ಲಿ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಆತಂಕ ಸೃಷ್ಟಿಸಿದ ಪ್ರಸಂಗ ಜರುಗಿದೆ.

ಶನಿವಾರ ಮ್ಯಾಂಚೆಸ್ಟರ್‌ನಿಂದ ಇಸ್ಲಾಮಾಬಾದ್‌ಗೆ ಬರುತ್ತಿದ್ದ ವಿಮಾನ ರನ್‌ವೇನಲ್ಲಿ ತೆರಳುತ್ತಿದ್ದ ವೇಳೆ ಇಂಥದ್ದೊಂದು ಪ್ರಮಾದ ಆಗಿದೆ. ಮಹಿಳೆ ಟಾಯ್ಲೆಟ್‌ ಬಾಗಿಲು ಎಂದು ತಪ್ಪು ಭಾವಿಸಿ ತುರ್ತು ನಿರ್ಗಮನ ದ್ವಾರದ ಬಟನ್‌ ಒತ್ತಿದ್ದಾಳೆ. ಬಳಿಕ ವಿಮಾನವನ್ನು ನಿಲ್ಲಿಸಲಾಗಿದೆ. ಅಲ್ಲದೇ 40 ಪ್ರಯಾಣಿಕರನ್ನು ವಿಮಾನದಿಂದ ಲಗೇಜ್‌ ಸಹಿತ ಇಳಿಸಿ ತಪಾಸಣೆ ಮಾಡಿದ್ದರಿಂದ ಪ್ರಯಾಣ ಸುಮಾರು 7 ಗಂಟೆಯಷ್ಟು ವಿಳಂಬಗೊಂಡಿದೆ.

ವಿಮಾನ ವಿಳಂಬವಾಗಿದ್ದಕ್ಕೆ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ನಷ್ಟದಲ್ಲಿರುವ ಪಾಕ್‌ ವಿಮಾನಯಾನ ಸಂಸ್ಥೆಗೆ ಇನ್ನಷ್ಟುಹೊರೆಯನ್ನು ತಂದೊಡ್ಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು