ಲಾಲ್’ಬಾಗ್’ನಲ್ಲಿ ಇನ್ನುಮುಂದೆ ಇಂತಹದ್ದಕ್ಕೆಲ್ಲಾ ಅವಕಾಶವಿಲ್ಲ.!

By Suvarna Web DeskFirst Published Mar 3, 2018, 10:36 AM IST
Highlights

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಿಡಮರಗಳನ್ನು ಹೊರತು ಪಡಿಸಿ ಇನ್ನಿತರೆ ಎಲ್ಲಾ ರೀತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣಗಳನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಆದೇಶಿಸಿದೆ.

ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಿಡಮರಗಳನ್ನು ಹೊರತು ಪಡಿಸಿ ಇನ್ನಿತರೆ ಎಲ್ಲಾ ರೀತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣಗಳನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಆದೇಶಿಸಿದೆ.

ಮದುವೆ ಹಾಗೂ ಗರ್ಭಿಣಿಯರ ಫೋಟೋ ಶೂಟ್ ಮಾಡುವುದಕ್ಕಾಗಿ ನಗರದ ಹೊರ ಭಾಗಗಳಿಂದ ಲಾಲ್ ಬಾಗ್‌ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹ ಸಂದರ್ಭದಲ್ಲಿ ಒಂದೊಂದು ವೃತ್ತಿಪರ ಛಾಯಾಗ್ರಾಹಕರು ಬರುತ್ತಿದ್ದು, ಅವರ ಗುಂಪಿನಲ್ಲಿ ಸುಮಾರು 10ಕ್ಕೂ ಹೆಚ್ಚು ಜನರಿರುತ್ತಾರೆ. ಇವರಿಂದ ಉದ್ಯಾನದಲ್ಲಿ ನೆಮ್ಮದಿ ಕಳೆಯಲು ಬರುವವರಿಗೆ ತೀವ್ರತರದ ಕಿರಿಕಿರಿಯಾಗುತ್ತಿದೆ.

ಮುಜುಗರಕ್ಕೂ ಕಾರಣವಾಗುತ್ತಿದೆ. ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಚಲನಚಿತ್ರ, ಧಾರಾವಾಹಿ, ಸಾಕ್ಷ್ಯಚಿತ್ರ ಚಿತ್ರೀಕರಣವನ್ನು ಈಗಾಗಲೇ ನಿಷೇಧಿಸಲಾಗಿದ್ದು, ಜನರಿಗೆ ಕಿರಿಕಿರಿ ಯುಂಟು ಮಾಡುವ ಫೋಟೋ ಶೂಟ್‌ಗೆ ತಡೆ ಹಾಕ ಲಾಗುತ್ತಿದೆ.

ಮನೋರಂಜನಾ ಉದ್ದೇಶದಿಂದ ಕ್ಯಾಮರಾದಲ್ಲಿ ಹೂವುಗಳು, ಗಿಡ ಮರಗಳು ಸೇರಿದಂತೆ ಉದ್ಯಾನದ ಇತರೆ ಸೌಂದರ್ಯವನ್ನು ಸೆರೆಹಿಡಿಯಲು ಅವಕಾಶ ವಿದೆ. ಇದಕ್ಕಾಗಿ ಪ್ರತಿ ಕ್ಯಾಮರಾಗೆ 50 ರು.ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಛಾಯಾಚಿತ್ರ ಗಳನ್ನು ತೆಗೆಯುವ ಮೂಲಕ ಉದ್ಯಾನದ ಸೌಂದರ್ಯ ಧಕ್ಕೆಯಾಗುವಂತೆ ನಡೆದುಕೊಳ್ಳಲಾಗುತ್ತಿರುವ ಕಾರಣ ಇದಕ್ಕೆ ಕಡಿವಾಣ ಹಾಕಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ವಿರುದ್ಧ ಕಠಿಣ ಕ್ರಮ, ಜತೆಗೆ ದಂಡ ವಿಧಿಸಲಾಗುವುದು ಎಂದು ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

click me!