ಕಳೆದ 5 ವರ್ಷಗಳಲ್ಲೇ ತೈಲ ಬೆಲೆ ಭಾರೀ ಏರಿಕೆ

First Published May 17, 2018, 4:40 PM IST
Highlights

ಪೆಟ್ರೋಲ್, ಡೀಸೆಲ್ ದರದಲ್ಲಿ ಬಾರಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ಕರ್ನಾಟಕ ಚುನಾವಣೆ ಮುಕ್ತಾಯವಾದ ಒಂದೇ ದಿನಕ್ಕೆ ತೈಲ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಬರೋಬ್ಬರು 4 ರು. ಏರಿಕೆ ಮಾಡುವ ಚಿಂತನೆ ನಡೆಸಲಾಗಿದೆ. 
 

ಬೆಂಗಳೂರು :  ಪೆಟ್ರೋಲ್, ಡೀಸೆಲ್ ದರದಲ್ಲಿ ಬಾರಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ಕರ್ನಾಟಕ ಚುನಾವಣೆ ಮುಕ್ತಾಯವಾದ ಒಂದೇ ದಿನಕ್ಕೆ ತೈಲ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಬರೋಬ್ಬರು 4 ರು. ಏರಿಕೆ ಮಾಡುವ ಚಿಂತನೆ ನಡೆಸಲಾಗಿದೆ. 
 
ಕಳೆದ ಏಪ್ರಿಲ್ 24ರ ಬಳಿಕ 19 ದಿನಗಳ ಅಂತರದಲ್ಲಿ ತೈಲ ಬೆಲೆ ಏರಿಕೆ ಮಾಡಲಾಗಿತ್ತು. ಸದ್ಯ ಪ್ರತೀ ಲೀಟರ್ ಪೆಟ್ರೋಲ್ ದರಲ್ಲಿ 69 ಪೈಸೆ ಏರಿಕೆ ಮಾಡಲಾಗಿದ್ದು, ಡೀಸೆಲ್ ದರದಲ್ಲಿ 22 ಪೈಸೆ ಏರಿಕೆ ಮಾಡಲಾಗಿದೆ. 

ಇದರಿಂದ ಸದ್ಯ ದಿಲ್ಲಿ ಮಾರುಕಟ್ಟೆಯಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ದರ 75. 31 ರು.ಗಳಿದೆ. ಡೀಸೆಲ್ ದರ 66.79 ರು.ಗಳಿದೆ. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣದ ಬೆಲೆ ಏರಿಕೆಯಾಗಿದೆ.

ಇನ್ನು ಮುಂದಿನ ವಾರದ ವೇಳೆ ತೈಲ ಮಾರುಕಟ್ಟೆಯಲ್ಲಿ ಪ್ರತೀ ಲೀಟರ್ ಡೀಸೆಲ್ ಮೇಲೆ 3.5 ರು ಏರಿಕೆ ಮಾಡಲು ಹಾಗೂ ಪೆಟ್ರೋಲ್ ದರದಲ್ಲಿ 4.5 ರು ಏರಿಕೆ ಮಾಡಲು ಚಿಂತನೆ ನಡೆದಿದೆ. 

click me!